ಕರ್ನಾಟಕ

karnataka

ETV Bharat / videos

ಮೈಸೂರಿನಲ್ಲಿ ಮೋರಿಗೆ ಬಿದ್ದ ಹಸು.. ಅಗ್ನಿಶಾಮಕದಳ ಸಿಬ್ಬಂದಿಯಿಂದ ರಕ್ಷಣೆ - ಮೈಸೂರಿನಲ್ಲಿ ಮೋರಿಗೆ ಬಿದ್ದು ಪರದಾಡಿದ ಹಸು

By

Published : Mar 29, 2022, 3:52 PM IST

Updated : Feb 3, 2023, 8:21 PM IST

ಮೈಸೂರು: ರಸ್ತೆಯಲ್ಲಿ ಮೇವು ಹುಡುಕುತ್ತ ಹೊರಟ ಬಿಡಾಡಿ ಹಸುವೊಂದು ಕಾಲು ಜಾರಿ ಮೋರಿಯಲ್ಲಿ ಬಿದ್ದಿದ್ದ ಘಟನೆ ನಗರದಲ್ಲಿ ನಡೆದಿದೆ. ಅದು ಬಿದ್ದ ನಂತರ ಮೇಲೆ ಏಳಲಾಗದೆ ಒದ್ದಾಡಿದ್ದು, ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಸುವನ್ನು ರಕ್ಷಿಸಿದ್ದಾರೆ. ನಗರದ ಗನ್ ಹೌಸ್ ಬಳಿ ರಾಜಕಾಲುವೆ ಮಾದರಿಯ ಬಳಿ ಹೋಗುವಾಗ ಆಯತಪ್ಪಿ ಮೋರಿಗೆ ಬಿದ್ದಿದೆ. ಬಿದ್ದ ರಭಸಕ್ಕೆ ಹಸುವಿನ‌ ಕಾಲಿಗೆ ಗಾಯವಾಗಿದ್ದು, ನಿಲ್ಲಲು ಸಹ ಸಾಧ್ಯವಾಗದೆ ಕೊಳಚೆ ಮೋರಿಯಲ್ಲಿ ಮಲಗಿದೆ. ಇದನ್ನು ಗಮನಿಸಿದ ದಾರಿಹೋಕರು ಹಾಗೂ ಆಟೋ ಚಾಲಕರು ಸ್ಥಳಕ್ಕೆ ಬಂದು ಮೇಲೆತ್ತಲು ಪ್ರಯತ್ನ ನಡೆಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅದನ್ನು ಕಾಪಾಡಿದ್ದಾರೆ.
Last Updated : Feb 3, 2023, 8:21 PM IST

ABOUT THE AUTHOR

...view details