ಲ್ಯಾಂಡಿಂಗ್ ವೇಳೆ ಕರಾವಳಿ ಭದ್ರತಾ ಪಡೆ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ - ಕರಾವಳಿ ಭದ್ರತಾ ಪಡೆಯ ವಿಮಾನ
ಕಾನ್ಪುರ (ಉತ್ತರಪ್ರದೇಶ): ಕರಾವಳಿ ಭದ್ರತಾ ಪಡೆಯ ಲಘು ವಿಮಾನವೊಂದು ಅಗ್ನಿ ಅವಘಡಕ್ಕೀಡಾಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಅದೃಷ್ಟವಶಾತ್ ಪೈಲಟ್ ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಚೆನ್ನೈನಿಂದ ಕಾನ್ಪುರಕ್ಕೆ ಬಂದಿದ್ದ ಈ ವಿಮಾನವು ಇಲ್ಲಿನ ಚಕೇರಿ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿತ್ತು. ಇದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಪೈಲಟ್ ತನ್ನ ನಿಯಂತ್ರಣ ಕಳೆದುಕೊಂಡಿದ್ದು ರನ್ವೇ ಬಿಟ್ಟು ವಿಮಾನ ಬೇರೆಡೆ ಬಂದು ಡಿಕ್ಕಿ ಹೊಡೆದು ಅಲ್ಲಿಯೇ ನಿಂತಿತು. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ಘಟನೆ ಕಳೆದ ಮಂಗಳವಾರ ನಡೆದಿದೆ ಎನ್ನಲಾಗುತ್ತಿದೆ. ಈ ಘಟನೆಯ ದೃಶ್ಯಾವಳಿ ಇದೀಗ ವೈರಲ್ ಆಗಿವೆ.
Last Updated : Feb 3, 2023, 8:18 PM IST