ಕರ್ನಾಟಕ

karnataka

ETV Bharat / videos

ಉಣಕಲ್​ ಬಳಿ ಪಾರ್ಕಿಂಗ್​ ವಿಚಾರಕ್ಕೆ ಮಾರಾಮಾರಿ.. VIDEO - ಹುಬ್ಬಳ್ಳಿ ಕಾರು ಪಾರ್ಕಿಂಗ್ ಗಲಾಟೆ

By

Published : Mar 10, 2022, 10:50 PM IST

Updated : Feb 3, 2023, 8:19 PM IST

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಗರದ ಉಣಕಲ್ ಬಳಿ ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬದ ನಡುವೆ ಮಾರಾಮಾರಿ ನಡೆದಿದೆ. ಸಾರ್ವಜನಿಕರೊಬ್ಬರು ಇಂದು ರಸ್ತೆ ಪಕ್ಕ ಕಾರು ಪಾರ್ಕ್ ಮಾಡಿ ಹೋಟೆಲ್​ಗೆ ಹೋಗಿದ್ದರು, ಇದಕ್ಕೆ ರೊಚ್ಚಿಗೆದ್ದ ಪಕ್ಕದ ಮನೆಯವರು ತಮ್ಮ ಮನೆಯೆದುರು ಯಾಕೆ ಪಾರ್ಕ್​ ಮಾಡಿದ್ದೀರಾ ಎಂದು ಕಾರಿನ ಗ್ಲಾಸ್ ಒಡೆದು ಚಾಲಕನಿಗೆ ಹೊಡೆದಿದ್ದಾರೆ. ಬಳಿಕ ಕಾರು ಚಾಲಕ ಪುನಃ ತನ್ನ ಕುಟುಂಬದ ಜೊತೆಗೆ ಬಂದು ಜಗಳ ತೆಗೆದಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಲಾಟೆಯ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
Last Updated : Feb 3, 2023, 8:19 PM IST

ABOUT THE AUTHOR

...view details