ಕರ್ನಾಟಕ

karnataka

ETV Bharat / videos

ಸಿಂಹಪ್ರಿಯಾ ಮದುವೆಗೆ ಸ್ಪೆಷಲ್ ಗಿಫ್ಟ್ ಕೊಟ್ಟ 'ಯದಾ ಯದಾ ಹಿ' ಚಿತ್ರತಂಡ - etv bharat kannada

By

Published : Jan 27, 2023, 10:02 PM IST

Updated : Feb 3, 2023, 8:39 PM IST

ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಿನ್ನೆಯಷ್ಟೇ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲ ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಈ ನೂತನ ಜೋಡಿಗೆ 'ಯದಾ ಯದಾ ಹಿ' ಚಿತ್ರತಂಡವು ಸ್ಪೆಷಲ್ ಉಡುಗೊರೆಯೊಂದನ್ನು ನೀಡಿದೆ.

ವಸಿಷ್ಠಸಿಂಹ, ಹರಿಪ್ರಿಯಾ ಹಾಗೂ ದಿಗಂತ್ ಮಂಚಾಲೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಯದಾ ಯದಾ ಹಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಚಿತ್ರತಂಡವು ಸಿಂಹಪ್ರಿಯಾ ಜೋಡಿಗೆ ಮದುವೆ ಗಿಫ್ಟ್ ನೀಡಿದ್ದಾರೆ. ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಮೊದಲ ಬಾರಿಗೆ ವಸಿಷ್ಠ ಹಾಗೂ ಹರಿಪ್ರಿಯಾ ಒಟ್ಟಿಗೆ ನಟಿಸಿದ್ದಾರೆ. ತೆಲುಗಿನ 'ಎವುರು' ಚಿತ್ರದ ರಿಮೇಕ್ ಇದಾಗಿದ್ದು, ತೆಲುಗಿನಲ್ಲಿ ಎರಡು ಚಿತ್ರ ನಿರ್ದೇಶಿಸಿರುವ ಅಶೋಕ್‌ ತೇಜ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ತೆಲುಗಿನಲ್ಲಿ ನಟಿ ರೆಜಿನಾ ನಿರ್ವಹಿಸಿದ್ದ ಪಾತ್ರವನ್ನು ಹರಿಪ್ರಿಯಾ ಹಾಗೂ ಅದ್ವಿಶೇಷ್ ಪಾತ್ರವನ್ನು ದಿಗಂತ್ ಮಾಡಿದ್ದಾರೆ. ಈ ಚಿತ್ರಕ್ಕೆ ರೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದರಾಬಾದ್‌ನ ರಾಜೇಶ್ ಅಗರವಾಲ್ ಬಂಡವಾಳ ಹೂಡಿದ್ದಾರೆ.

ಇಂಗ್ಲೀಷ್ ಭಾಷೆಯಲ್ಲಿ ದಿ ಇನ್ವಿಸಿಬಲ್ ಗೆಸ್ಟ್ ಹೆಸರಿನಲ್ಲಿ ತಯಾರಾಗಿದ್ದ ಈ ಚಿತ್ರ ಹಿಂದಿ ಭಾಷೆಯಲ್ಲೂ ನಿರ್ಮಾಣವಾಗಿತ್ತು, ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿ ಆಗಿದೆ. ಚರಣ್‌ ಪಕಡ ಅವರ ಸಂಗೀತ ನಿರ್ದೇಶನ, ಯೋಗಿ ಅವರ ಕ್ಯಾಮೆರಾ ವರ್ಕ್, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿರುವ 'ಯದಾ ಯದಾ ಹಿ' ಚಿತ್ರತಂಡ ಸದ್ಯದಲ್ಲೇ ಟ್ರೈಲರ್ ಬಿಡುಗಡೆ ಮಾಡಿ, ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಲಿದೆ.

ಇದನ್ನೂ ಓದಿ:ಭಾರಿ ಮೊತ್ತಕ್ಕೆ 'ಹೊಯ್ಸಳ' ಆಡಿಯೋ ಹಕ್ಕು ಪಡೆದ ಆನಂದ್ ಆಡಿಯೋ

Last Updated : Feb 3, 2023, 8:39 PM IST

ABOUT THE AUTHOR

...view details