ಕರ್ನಾಟಕ

karnataka

ETV Bharat / videos

ಕೇಂದ್ರ ಬಜೆಟ್​: ಸರ್ಕಾರದಿಂದ ಮನೋರಂಜನಾ ಉದ್ಯಮಗಳ ನಿರ್ಲಕ್ಷ್ಯ : ಅಶೋಕ್​ ಪಂಡಿತ್​ - new income tax regime

By

Published : Feb 1, 2023, 11:11 AM IST

Updated : Feb 3, 2023, 8:39 PM IST

ಮುಂಬೈ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023ರ ಕೇಂದ್ರ ಬಜೆಟ್​ನ್ನು ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್​ ಎಲ್ಲ ರೀತಿಯಲ್ಲೂ ಹೆಚ್ಚಿನ ಮಹತ್ವ ಪಡೆದಿದೆ. ಬಜೆಟ್​ ಮಂಡನೆ ಬಗ್ಗೆ ಖ್ಯಾತ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್​ ಮಾತನಾಡಿದ್ದು, ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ಮನೋರಂಜನಾ ಉದ್ಯಮಗಳಿಗೆ ಮಹತ್ವ ನೀಡಿಲ್ಲ. ಪ್ರತೀ ಬಾರಿ ಬಜೆಟ್​ ಮಂಡನೆಯಾದಾಗ ಮನೋರಂಜನಾ ಉದ್ಯಮವನ್ನು ನಿರ್ಲಕ್ಷಿಸಲಾಗುತ್ತಿದೆ. ಇತರೆ ಕೈಗಾರಿಕೆಗಳಿಗೆ ನೀಡಿರುವ ಒತ್ತು ಮನೋರಂಜನಾ ಉದ್ಯಮಕ್ಕೆ ನೀಡಲಾಗಿಲ್ಲ ಎಂದು ಹೇಳಿದರು.

ಮನೋರಂಜನಾ ಉದ್ಯಮವು ಸಿನಿಮಾ, ದೂರದರ್ಶನ, ಒಟಿಟಿ ಮುಂತಾದವುಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಬಜೆಟ್ ಘೋಷಣೆ ಆದಾಗ ಮನೋರಂಜನಾ ಉದ್ಯಮಕ್ಕೆ ಏನಾದರೂ ಲಭಿಸುತ್ತದೆ ಎಂಬ ಭರವಸೆ ಇರುತ್ತದೆ. ಆದರೆ ದುರದೃಷ್ಟವಶಾತ್ ಮನೋರಂಜನಾ ಉದ್ಯಮವು ಯಾವಾಗಲೂ ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾ ಬಂದಿದೆ ಎಂದು ಅಭಿಪ್ರಾಯಪಟ್ಟರು. ಈ ಬಾರಿಯ ಬಜೆಟ್ ಮನೋರಂಜನಾ ಕ್ಷೇತ್ರಕ್ಕೆ ಕೆಲವು ಪ್ರಯೋಜನಗಳನ್ನು ತರುತ್ತದೆ ಎಂದು ಭಾವಿಸುತ್ತೇನೆ. ಕೋವಿಡ್​ ಲಾಕ್‌ಡೌನ್ ಸಂದರ್ಭದಲ್ಲಿ ಮನೋರಂಜನಾ ಉದ್ಯಮವು ಪ್ರಮುಖ ಪಾತ್ರವನ್ನು ವಹಿಸಿದೆ ಎಂದರು.

ಇದನ್ನೂ ಓದಿ :LIVE.. ಕೇಂದ್ರ ಬಜೆಟ್​: ಪ್ರಧಾನಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭ

Last Updated : Feb 3, 2023, 8:39 PM IST

ABOUT THE AUTHOR

...view details