ಕರ್ನಾಟಕ

karnataka

ETV Bharat / videos

ಜೋಯಿಡಾದಲ್ಲಿ ಪ್ರವಾಸಿಗರ ಕಾರು ಡಿಕ್ಕಿಯಾಗಿ ಮೂವರು ಮಹಿಳೆಯರ ದುರ್ಮರಣ - ಕಾರು ಡಿಕ್ಕಿಯಾಗಿ ಮೂವರು ಮಹಿಳೆಯರ ದುರ್ಮರಣ

By

Published : Jan 20, 2023, 10:32 PM IST

Updated : Feb 3, 2023, 8:39 PM IST

ಕಾರವಾರ:ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪ್ರವಾಸಿಗರ ಕಾರು ಡಿಕ್ಕಿಯಾಗಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಜೋಯಿಡಾದ ರಾಮನಗರ ಸಮೀಪ ಹುಬ್ಬಳ್ಳಿ-ಗೋವಾ ಹೆದ್ದಾರಿಯ ಸೀತಾವಾಡದಲ್ಲಿ ಶುಕ್ರವಾರ ಸಂಭವಿಸಿದೆ. ಖಾನಾಪುರದ ಘಾರ್ಲಿ ಮೂಲದ ಪಾರ್ವತಿ ಗಾವಡಾ, ದುರ್ಗೆ ಕೋಲ್ಸೇಕರ ಹಾಗೂ ತುಳಸಿ ಗಾವಡಾ ಮೃತ ಮಹಿಳೆಯರು ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ರಾಮನಗರದ ವಿಪಿನ್ ತಾಳ್ವೆ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೂವರು ಮಹಿಳೆಯರು ರಸ್ತೆ ಪಕ್ಕ ನಡೆದು ಹೋಗುತ್ತಿದ್ದರು. ಇದೇ ವೇಳೆ, ಪ್ರವಾಸಕ್ಕೆಂದು ಗೋವಾಗೆ ತೆರಳುತ್ತಿದ್ದ ತಮಿಳುನಾಡು ನೋಂದಣಿಯ ಕಾರು ಹರಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೌಟುಂಬಿಕ ಕಲಹ:ಪತಿಯ ಕತ್ತು ಕೊಯ್ದು ಕೊಲೆ.. ಬಳಿಕ ಅಪಾರ್ಟ್​ಮೆಂಟ್​ಗೆ ಬೆಂಕಿ ಇಟ್ಟ ಪತಿ 

Last Updated : Feb 3, 2023, 8:39 PM IST

ABOUT THE AUTHOR

...view details