ಕುಕ್ಕೆ ಸುಬ್ರಹ್ಮಣ್ಯಕ್ಕೆ ತಮಿಳು ನಟ ವಿಶಾಲ್ ಭೇಟಿ - Tamil actor Vishal visits
ಸುಬ್ರಹ್ಮಣ್ಯ: ತಮಿಳು ನಟ ವಿಶಾಲ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶುಕ್ರವಾರ ರಾತ್ರಿ ಕ್ಷೇತ್ರಕ್ಕೆ ಆಗಮಿಸಿದ ಅವರು ಮಹಾಪೂಜೆ ಹಾಗೂ ಹೊರಾಂಗಣ ಉತ್ಸವದಲ್ಲಿ ಪಾಲ್ಗೊಂಡರು. ಶನಿವಾರ ಮುಂಜಾನೆ ಆಶ್ಲೇಷ ಬಲಿ ಹಾಗೂ ಮಧ್ಯಾಹ್ನದ ಮಹಾಪೂಜೆ ಸೇವೆ ನೆರವೇರಿಸಿದರು. ದೇವಸ್ಥಾನದ ವತಿಯಿಂದ ಅವರನ್ನು ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಗೌರವಿಸಲಾಗಿದೆ. ಸ್ನೇಹಿತರೊಂದಿಗೆ ಬಂದಿರುವ ನಟ ಇದಕ್ಕೂ ಮುನ್ನ ಧರ್ಮಸ್ಥಳಕ್ಕೆ ಬಂದು ದರ್ಶನ ಪಡೆದಿದ್ದರು.
Last Updated : Feb 3, 2023, 8:32 PM IST