ಹೃತಿಕ್ ರೋಷನ್ ಮತ್ತು ವಿಕ್ಕಿ ಕೌಶಲ್‌ಗೆ ಬೌನ್ಸರ್ ಆಗಲು ಇಷ್ಟಪಡುವೆ: ತಮನ್ನಾ ಭಾಟಿಯಾ ಮನದ ಮಾತು - ಬಬ್ಲಿ ಬೌನ್ಸರ್ ಚಿತ್ರದ ಟ್ರೈಲರ್ ಬಿಡುಗಡೆ
ತಮನ್ನಾ ಭಾಟಿಯಾ ನಟನೆ ಮತ್ತು ಮಧುರ್ ಭಂಡಾರ್ಕರ್ ನಿರ್ದೇಶನದ ಬಬ್ಲಿ ಬೌನ್ಸರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸೋಮವಾರ ಮುಂಬೈನಲ್ಲಿ ಚಿತ್ರದ ಟ್ರೈಲರ್ ಅನ್ನು ಡಿಸ್ನಿಪ್ಲಸ್ ಹಾಟ್‌ಸ್ಟಾರ್‌ನ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸಾಹಸ ಮತ್ತು ಫ್ಯಾಮಿಲಿ ಎಂಟರ್ಟೈನರ್ ಚಿತ್ರ ಇದಾಗಿದ್ದು, ಜನಪ್ರಿಯ ಯುವ ಐಕಾನ್ ತಮನ್ನಾ ಅವರು ಲೇಡಿ ಬೌನ್ಸರ್ ಆಗಿ ನಟಿಸಿದ್ದಾರೆ. ಇದೀಗ ಟ್ರೈಲರ್ ಅನಾವರಣಗಗೊಂಡಿದ್ದು, ಬಾಹುಬಲಿ ನಟಿಯ ಹೊಸ ಅವತಾರಕ್ಕೆ ನೆಟಿಜನ್ಸ್ ಫಿದಾ ಆಗಿದ್ದಾರೆ. ಲಾಂಚಿಂಗ್ ಈವೆಂಟ್‌ನಲ್ಲಿ ತಮನ್ನಾ ಅವರು ಬಾಲಿವುಡ್ ಹ್ಯಾಂಡ್‌ಸಮ್ ಹಂಕ್‌ಗಳಾದ ಹೃತಿಕ್ ರೋಷನ್ ಮತ್ತು ವಿಕ್ಕಿ ಕೌಶಲ್‌ಗೆ ಬೌನ್ಸರ್ ಆಗಲು ಬಯಸುವುದಾಗಿ ಹೇಳಿಕೊಂಡರು.
Last Updated : Feb 3, 2023, 8:27 PM IST