ತೃತೀಯಲಿಂಗಿ ಪಾತ್ರದಲ್ಲಿ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ - ತಾಲಿ ಸೀರಿಸ್ ರಿಲೀಸ್ಗೆ ದಿನಗಣನೆ - ತಾಲಿ ಸೀರಿಸ್
ಮಾಜಿ ವಿಶ್ವಸುಂದರಿ, ಬಾಲಿವುಡ್ ಬಹುಬೇಡಿಕೆ ನಟಿ ಸುಶ್ಮಿತಾ ಸೇನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಪ್ರೊಜೆಕ್ಟ್ 'ತಾಲಿ'. ಇದೇ ಮೊದಲ ಬಾರಿಗೆ ಸುಶ್ಮಿತಾ ಸೇನ್ ಅವರು ತೃತೀಯಲಿಂಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಿಂದೆಂದೂ ನೋಡಿರದ ಅವತಾರದಲ್ಲಿ ಸುಶ್ಮಿತಾ ಸೇನ್ ಕಾಣಿಸಿಕೊಳ್ಳಲಿದ್ದಾರೆ.
ತೃತೀಯಲಿಂಗಿ ಕಾರ್ಯಕರ್ತೆ ಶ್ರೀ ಗೌರಿ ಸಾವಂತ್ ಅವರ ಜೀವನಾಧಾರಿತ ಕಥೆಯೇ ಈ ತಾಲಿ ಸರಣಿ. ಈ ಸೀರಿಸ್ ಮೇಲೆ ಅಭಿಮಾನಿಗಳ ನಿರೀಕ್ಷೆ ದೊಡ್ಡದಿದೆ. ಗೌರಿ ಸಾವಂತ್ ಪಾತ್ರದ ಮೂಲಕ ಟ್ರಾನ್ಸ್ಜೆಂಡರ್ ಕುರಿತಾಗಿರುವ ಜನರ ಗ್ರಹಿಕೆಗಳನ್ನು ಬದಲಾಯಿಸಬಹುದು ಎಂದು ನಟಿ ಸುಶ್ಮಿತಾ ಸೇನ್ ನಂಬಿದ್ದಾರೆ. ಯಾವುದೇ ಭಾರತೀಯ ನಟಿ ಈವರೆಗೆ ತೃತೀಯಲಿಂಗಿ ಪಾತ್ರ ನಿರ್ವಹಿಸಿಲ್ಲ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ತಾಲಿ' ಸೀರಿಸ್ ಇದೇ ಆಗಸ್ಟ್ 15ರಂದು ಜಿಯೋ ಸಿನಿಮಾದಲ್ಲಿ ಪ್ರಸಾರ ಪ್ರಾರಂಭಿಸಲಿದೆ. ಈ ಹಿನ್ನೆಲೆ ನಟಿ ಸುಶ್ಮಿತಾ ಸೇನ್ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.
ಇದನ್ನೂ ಓದಿ:None of your business: ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡಿದವರಿಗೆ ಸುಶ್ಮಿತಾ ಸೇನ್ ತಿರುಗೇಟು