ಹಿಮಾಚಲ ಪ್ರದೇಶದ ಕುಲ್ಲೂದಲ್ಲಿ ಭಾರಿ ಹಿಮಪಾತ ಶುರು: ಪ್ರವಾಸೋದ್ಯಮ ವ್ಯಾಪಾರ ಜೋರು - ಲೋಕೋಪಯೋಗಿ ಇಲಾಖೆ
ಕುಲ್ಲೂ:ಹಿಮಾಚಲ ಪ್ರದೇಶ ರಾಜ್ಯದ ಕುಲ್ಲೂ ಜಿಲ್ಲೆಯ ಪ್ರದೇಶಗಳಲ್ಲಿ ಹಿಮಪಾತ ಶುರುವಾಗಿದೆ. ಪ್ರವಾಸಿ ಪಟ್ಟಣ ಮನಾಲಿಯ ಪಕ್ಕದ ಸೊಲಂಗನಾಳ ಮತ್ತು ಡುಂಡಿಯಲ್ಲಿ ಬೆಳಗ್ಗೆಯಿಂದ ಹಿಮ ಸುರಿಯುತ್ತಿದೆ. ಇದರಿಂದ ಅಟಲ್ ಸುರಂಗ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಸೊಲಂಗನಾಳದಲ್ಲಿ ನಾಲ್ಕು ಇಂಚಿಗಿಂತಲೂ ಹೆಚ್ಚು ಹಿಮಪಾತ ಬಿದ್ದಿದ್ದು, ಇಲ್ಲಿ ವಾಹನಗಳ ಹೆಚ್ಚಿನ ಸಂಚಾರ ನಿಷೇಧಿಸಲಾಗಿದೆ.
ಇಲ್ಲಿ ಮಳೆ ಮತ್ತು ಹಿಮಪಾತದಿಂದಾಗಿ ಪ್ರವಾಸೋದ್ಯಮ ವ್ಯಾಪಾರವೂ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ಪ್ರವಾಸಿಗರು ಹಿಮಪಾತವನ್ನು ಆನಂದಿಸಲು ಕುಲ್ಲೂ ಜಿಲ್ಲೆಯ ವಿವಿಧ ಪ್ರದೇಶಗಳನ್ನು ತಲುಪುತ್ತಿದ್ದಾರೆ. ಹವಾಮಾನ ವೈಪರೀತ್ಯ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದ್ದು, ವಿವಿಧೆಡೆ ಲೋಕೋಪಯೋಗಿ ಇಲಾಖೆಯ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ ಎಂದು ಡಿಸಿ ಅಶುತೋಷ್ ಗರ್ಗ್ ತಿಳಿಸಿದ್ದಾರೆ.
ಇದನ್ನೂಓದಿ:ಸ್ಪೋರ್ಟ್ಸ್ ಶಾಪಿಂಗ್ ಮಾಲ್ನಲ್ಲಿ ಭಾರಿ ಅಗ್ನಿ ಅವಘಡ: ಇತರ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ