ಕರ್ನಾಟಕ

karnataka

ಸೋಶಿಯಲ್​ ಮೀಡಿಯಾ ಸ್ಟಾರ್ ಅರೆಸ್ಟ್

ETV Bharat / videos

ಉದ್ಯಮಿಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಸೋಶಿಯಲ್​ ಮೀಡಿಯಾ ಸ್ಟಾರ್ ಅರೆಸ್ಟ್ - ಜಸ್ನೀತ್ ಕೌರ್​

By

Published : Apr 4, 2023, 1:10 PM IST

ಲೂಧಿಯಾನ (ಪಂಜಾಬ್): ಬ್ಲ್ಯಾಕ್‌ಮೇಲ್ ಮತ್ತು ಬೆದರಿಕೆ ಆರೋಪದ ಮೇಲೆ ಸೋಶಿಯಲ್​​ ಮೀಡಿಯಾ ಸ್ಟಾರ್ ಜಸ್ನೀತ್ ಕೌರ್​ ಎಂಬುವರನ್ನು ಲೂಧಿಯಾನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಗುರ್ಶಿಂದರ್ ಕೌರ್, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಇವರು ಓರ್ವ ಉದ್ಯಮಿಗೆ ಬ್ಲ್ಯಾಕ್​ ಮೇಲ್​ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಉದ್ಯಮಿ ಗುರ್ಬೀರ್ ಸಿಂಗ್ ಗಾರ್ಚಾ ದೂರಿನ ಮೇರೆಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.  

ಜಸ್ನೀತ್ ಕೌರ್ ತಮ್ಮ ಸಹ ಆರೋಪಿಗಳೊಂದಿಗೆ ದೂರುದಾರ ಗುರ್ಬೀರ್‌ ಅವರಿಗೆ ಸಾಕಷ್ಟು ಕರೆ ಮಾಡಿದ್ದಾರೆ. ದೂರುದಾರರ ತಂದೆ ಶಿರೋಮಣಿ ಅಕಾಲಿದಳದ ಕಾರ್ಪೊರೇಟರ್ ಆಗಿದ್ದರು. ಭಾನುವಾರ ಮಾಡೆಲ್ ಟೌನ್ ಪೊಲೀಸರು ಜಸ್ನೀತ್ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.  

ಈ ಹಿಂದೆ ಸೆಪ್ಟೆಂಬರ್ 2022ರಲ್ಲಿ ಆರೋಪಿಯು ಹನಿಟ್ರ್ಯಾಪ್‌ನಲ್ಲಿ ಈ ದೂರುದಾರರನ್ನು ಸಿಲುಕಿಸಿ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 35 ಲಕ್ಷ ರೂಪಾಯಿಗೆ ಈ ಒಪ್ಪಂದವನ್ನು ಮಾಡಿಕೊಂಡಿದ್ದರು. ಆರೋಪಿಗೆ ಗುರ್ಬೀರ್ ಒಂದು ಲಕ್ಷ ರೂಪಾಯಿ ನೀಡಿದ್ದರು. ಉಳಿದ ಮೊತ್ತವನ್ನು ಸಂಗ್ರಹಿಸಲು ಆರೋಪಿ ಮತ್ತು ಆಕೆಯ ಸಹಚರರು ಗುರ್ಬೀರ್ ಅವರನ್ನು ಭೇಟಿಯಾದ ವೇಳೆ ಪೊಲೀಸರು ಅವರನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.  

ಇದನ್ನೂ ಓದಿ:'ಆ ಹುಡುಗಿಯಾದರೂ ಸಂತೋಷವಾಗಿರಲಿ': ನಾಗ ಚೈತನ್ಯ - ಶೋಭಿತಾ ಡೇಟಿಂಗ್​ ವದಂತಿಗೆ ಸಮಂತಾ ಪ್ರತಿಕ್ರಿಯೆ

ಕಾಂಗ್ರೆಸ್ ನಾಯಕನೊಂದಿಗೆ ಸಂಪರ್ಕ ಆರೋಪ: ಗುರ್ಬೀರ್ ಅವರು ಜಸ್ನೀತ್ ಕೌರ್ ವಿರುದ್ಧ 2022ರಲ್ಲಿ ಮೊಹಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು. ಅದರ ಮಾಹಿತಿಯೂ ಪೊಲೀಸರ ಬಳಿ ಇದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಬೆದರಿಕೆ ಹಾಕುತ್ತಿರುವ ವ್ಯಕ್ತಿ ಕಾಂಗ್ರೆಸ್ ಮುಖಂಡನ ಆಪ್ತ ಸ್ನೇಹಿತ ಎಂಬುದು ತಿಳಿದುಬಂದಿದೆ. ಈ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ABOUT THE AUTHOR

...view details