ಬಮುಮುಖ ಪ್ರತಿಭೆ ಸಿಮ್ರನ್ ಅಹುಜಾ ನೃತ್ಯಕ್ಕೆ ಮನಸೋತ ಪ್ರೇಕ್ಷಕರು - ದಾಂಡಿಯಾ ವಿಡಿಯೋ ನೋಡಿ - ಜಾರ್ಖಾಂಡ್ ದಾಂಡಿಯಾ
Published : Oct 19, 2023, 2:05 PM IST
ಪಲಾಮು (ಜಾರ್ಖಾಂಡ್): ಪಲಾಮು ಜನರು ದಾಂಡಿಯಾ ಕ್ವೀನ್ ಸಿಮ್ರನ್ ಅಹುಜಾ ಅವರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ದಾಂಡಿಯಾ ನೈಟ್ ಈವೆಂಟ್ ಅನ್ನು ಪಲಾಮು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಆಯೋಜಿಸಿತ್ತು. ಈವೆಂಟ್ನಲ್ಲಿ ಬಮುಮುಖ ಪ್ರತಿಭೆ ಸಿಮ್ರನ್ ಅಹುಜಾ ಭಾಗಿಯಾಗಿ ಪ್ರೇಕ್ಷಕರ ಖುಷಿಗೆ ಕಾರಣರಾದರು.
ದಾಂಡಿಯಾ ನೈಟ್: ಪಲಮುವಿನ ಶಿವಾಜಿ ಮೈದಾನದಲ್ಲಿ ಆಯೋಜಿಸಿದ್ದ ದಾಂಡಿಯಾ ನೈಟ್ ಅನ್ನು ಪಲಮು ಆಯುಕ್ತ ಮನೋಜ್ ಜೈಸ್ವಾಲ್, ಮಾಜಿ ಮೇಯರ್ ಅರುಣ್ ಶಂಕರ್, ಪಲಮು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಆನಂದ್ ಶಂಕರ್, ಉದ್ಯಮಿ ಜ್ಞಾನ್ ಶಂಕರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂರಾರು ಜನರು ಸಿಮ್ರನ್ ಅಹುಜಾ ಅವರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಸೆಲೆಬ್ರಿಟಿ ಸಿಮ್ರನ್ ಅವರೊಂದಿಗೆ ಹಲವು ಸಹ ಕಲಾವಿದರು ಉಪಸ್ಥಿತರಿದ್ದರು.
ಇದನ್ನೂ ಓದಿ:ತಮನ್ನಾ ಭಾಟಿಯಾ ಫಿಟ್ನೆಸ್ಗೆ ಫ್ಯಾನ್ಸ್ ಫಿದಾ: ಅಭಿನೇತ್ರಿಯ ಅಂದಕ್ಕೆ ಮಾರುಹೋದ ಅಭಿಮಾನಿಗಳು
ಬಿಗಿ ಬಂದೋಬಸ್ತ್:ಪಲಾಮು ಜನತೆಗಾಗಿ ಖ್ಯಾತನಾಮರ ದಾಂಡಿಯಾ ಕಾರ್ಯಕ್ರಮ ಆಯೋಜಿಸಿರುವುದು ಇದೇ ಮೊದಲು. ದಾಂಡಿಯಾ ನೈಟ್ ಈವೆಂಟ್ನಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಬಹುಮುಖ ಪ್ರತಿಭೆ ಸಿಮ್ರನ್ ಅಹುಜಾ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ದಾಂಡಿಯಾ ಈವೆಂಟ್ಗೆ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.