ನಾನು ಅಪ್ಪು ಅಭಿಮಾನಿ ಎಂದ ನಟ ಸಿದ್ಧಾರ್ಥ್: ಪುನೀತ್ ನನ್ನ ಗೆಳೆಯ ಎಂದ ರಾಣಾ - Gandhada gudi
ಬೆಂಗಳೂರು: ಪುನೀತ ಪರ್ವ ಕಾರ್ಯಕ್ರಮದಲ್ಲಿ ತೆಲುಗಿನ ನಟ ಸಿದ್ಧಾರ್ಥ್ ಕನ್ನಡದಲ್ಲಿ ತಮ್ಮ ಮಾತು ಆರಂಭಿಸಿದರು. ನಾನು ಅಪ್ಪು ಅವರ ಅಭಿಮಾನಿ. ಅದಕ್ಕೂ ಮೊದಲು ಶಿವಣ್ಣ ಅವರ ಫ್ಯಾನ್ ಎಂದರು. ನಟ ರಾಣಾ ದಗ್ಗುಬಾಟಿ ಮಾತನಾಡಿ, ನಾನು ಅಪ್ಪು ಗೆಳೆಯ. ಅಪ್ಪು ಕಾಡಿನಲ್ಲಿ ಶೂಟ್ ಮಾಡಿದ ಕೆಲವು ವಿಡಿಯೋಗಳ ತುಣುಕನ್ನು ನನಗೆ ಆಗಲೇ ಕಳಿಸಿದ್ದರು. ನಾನು ಆಗ ಯಾಕಿಷ್ಟು ಕಷ್ಟಪಟ್ಟು ಇದನ್ನೆಲ್ಲಾ ಮಾಡುತ್ತೀರಿ? ಎಂದು ಕೇಳಿದ್ದೆ. ಅದಕ್ಕೆ ಅವರು ಮುಂದಿನ ಪೀಳಿಗೆಗಾಗಿ ಎಂದಿದ್ದರು ಎಂದು ಸ್ಮರಿಸಿದರು.
Last Updated : Feb 3, 2023, 8:29 PM IST