ಕರ್ನಾಟಕ

karnataka

ಶಿರಡಿ ಸಾಯಿಬಾಬಾರ ದರ್ಶನ ಪಡೆದ ಶಿಲ್ಪಾ ಶೆಟ್ಟಿ ದಂಪತಿ: 'ಸುಖಿ' ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ

ETV Bharat / videos

ಶಿರಡಿ ಸಾಯಿಬಾಬಾರ ದರ್ಶನ ಪಡೆದ ಶಿಲ್ಪಾ ಶೆಟ್ಟಿ ದಂಪತಿ: 'ಸುಖಿ' ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ - ಈಟಿವಿ ಭಾರತ ಕನ್ನಡ

By ETV Bharat Karnataka Team

Published : Sep 4, 2023, 7:58 PM IST

ಶಿರಡಿ (ಮಹಾರಾಷ್ಟ್ರ): ಬಾಲಿವುಡ್​ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಸೋಮವಾರ ಶಿರಡಿ ಸಾಯಿಬಾಬಾರ ದರ್ಶನ ಪಡೆದರು. ಪತಿ ರಾಜ್​ ಕುಂದ್ರಾ ಜೊತೆ ಸಾಯಿಬಾಬಾರ ಸಮಾಧಿಗೆ ಭೇಟಿ ನೀಡಿ ಮಧ್ಯಾಹ್ನದ ಆರತಿಯಲ್ಲಿ ಪಾಲ್ಗೊಂಡರು. ಬಳಿಕ ದ್ವಾರಕಾಮಾಯಿ ಮತ್ತು ಗುರುಸ್ಥಾನ ದೇವಸ್ಥಾನಕ್ಕೂ ಶಿಲ್ಪಾ ಶೆಟ್ಟಿ ದಂಪತಿ ಭೇಟಿ ನೀಡಿದರು. 

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟಿ, "ನಾನು ಸಾಯಿಬಾಬಾರ ಭಕ್ತೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ನಾನು ಅವರ ಆಶೀರ್ವಾದ ಪಡೆಯಲು ಆಗಾಗ ಶಿರಡಿಗೆ ಭೇಟಿ ನೀಡುತ್ತೇನೆ. ನನ್ನ ಪತಿ ರಾಜ್ ಕುಂದ್ರಾ ಜೊತೆ ಸೇರಿ ನಿರ್ಮಿಸಿರುವ 'ಸುಖಿ' ಚಿತ್ರ ಇದೇ ಸೆಪ್ಟಂಬರ್​ 22 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪೋಸ್ಟರ್​ ಅನ್ನು ಬಾಬಾರ ಪಾದದ ಬಳಿ ಇಟ್ಟು ಸಿನಿಮಾವನ್ನು ಯಶಸ್ವಿಗೊಳಿಸುವಂತೆ ಪ್ರಾರ್ಥಿಸಿದೆ" ಎಂದು ಹೇಳಿದರು. 

ಅಲ್ಲದೇ, 'ಸುಖಿ' ಚಿತ್ರದ ಪ್ರಚಾರ ಕಾರ್ಯಗಳು ಮಂಗಳವಾರದಿಂದ (ನಾಳೆ) ಪ್ರಾರಂಭವಾಗಲಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್​ ಕುಂದ್ರಾ ಅವರನ್ನು ಶಿರಡಿ ಸಂಸ್ಥಾನದ ಆಡಳಿತಾಧಿಕಾರಿಗಳು ಶಾಲು ಹೊದಿಸಿ ಗೌರವಿಸಿದರು. 

ಇದನ್ನೂ ಓದಿ:ನಟಿ ಶಿಲ್ಪಾ ಶೆಟ್ಟಿ ದಂಪತಿಯಿಂದ ಬಾಂಗ್ಲಾಮುಖಿ ದೇವಸ್ಥಾನದಲ್ಲಿ ಯಾಗ - ವಿಡಿಯೋ

ABOUT THE AUTHOR

...view details