ಕರ್ನಾಟಕ

karnataka

ರಿಯಲ್ ಸ್ಟಾರ್ ಉಪೇಂದ್ರ ಹೊಸ ಮನೆ

ETV Bharat / videos

ವಿಡಿಯೋ: ರಿಯಲ್ ಸ್ಟಾರ್ ಉಪೇಂದ್ರರ ಬಹುಕೋಟಿ ಭವ್ಯ ಬಂಗಲೆಯ ಒಳನೋಟ - Upendra politics

By

Published : Apr 29, 2023, 7:53 PM IST

ಕನ್ನಡ ಚಿತ್ರರಂಗದಲ್ಲಿ ಬುದ್ಧಿವಂತ ನಟ ಹಾಗೂ ನಿರ್ದೇಶಕ ಅಂತಾ ಕರೆಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಕೆಲ ದಿನಗಳ ಹಿಂದೆ ಬಹುಕೋಟಿ ಮೌಲ್ಯದ ಹೊಸ ಮನೆಯನ್ನು ಖರೀದಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಅದ್ಧೂರಿಯಾಗಿ ಗೃಹ ಪ್ರವೇಶ ಸಮಾರಂಭ ಕೂಡ ನಡೆದಿದೆ. ಉಪೇಂದ್ರ ಪ್ರಿಯಾಂಕಾ ದಂಪತಿ, ಹೊಸ ಮನೆ ಪೂಜೆ ಫೋಟೋಗಳು ವೈರಲ್ ಆಗಿದ್ದವು. ಇದೀಗ, ಉಪೇಂದ್ರ ಅವರ ಹೊಸ ಮನೆಯ ಬೊಂಬಾಟ್ ವಿಡಿಯೋ ಅನಾವರಣಗೊಂಡಿದೆ.  

ಕಬ್ಜ ಸಿನಿಮಾದ ಪ್ಯಾನ್ ಇಂಡಿಯಾ ಸಕ್ಸಸ್ ನಂತರ ರಿಯಲ್ ಸ್ಟಾರ್ ಉಪೇಂದ್ರ ಎಲೆಕ್ಷನ್ ಕಡೆ ಗಮನ ಕೊಟ್ಟಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಜನರ ವಿಶ್ವಾಸ ಗಳಿಸೋ ಪ್ರಯತ್ನದಲ್ಲಿದೆ ಪ್ರಜಾಕೀಯ ಪಕ್ಷ. ಎಲೆಕ್ಷನ್ ಮುಗಿಯುತ್ತಿದ್ದಂತೆ ತಮ್ಮದೇ ಡೈರೆಕ್ಷನ್​ನಲ್ಲಿ ತಯಾರಾಗುತ್ತಿರುವ 'ಯು ಐ' ಚಿತ್ರದ ಶೂಟಿಂಗ್​​ ಮುಂದುವರಿಸಲಿದ್ದಾರೆ. ಹೀಗೆ ಎಲೆಕ್ಷನ್ ಜೊತೆ ಡೈರೆಕ್ಷನ್ ಅಂತಾ ಬ್ಯುಸಿಯಿರುವ ಉಪ್ಪಿ ಸದ್ಯ ಕತ್ರಿಗುಪ್ಪೆಯ ಹಳೇ ಮನೆಯಿಂದ ಹೊಸ ಮನೆಗೆ ಶಿಫ್ಟ್​ ಆಗಿದ್ದಾರೆ.

ಇದನ್ನೂ ಓದಿ:ಐಷಾರಾಮಿ ಮನೆ ಖರೀದಿಸಿದ ರಿಯಲ್​ ಸ್ಟಾರ್​:'ಅದೃಷ್ಟದ ಹುಡುಕಾಟ'ದಲ್ಲಿ ಉಪ್ಪಿ!

ABOUT THE AUTHOR

...view details