ವಿಡಿಯೋ: ಅಮೃತ್ಸರದ ಸಚ್‌ಖಂದ್ ಶ್ರೀ ಹರ್ಮಂದಿರ್ ಸಾಹಿಬ್‌ಗೆ ರಾಘವ್ ಪರಿಣಿತಿ ಭೇಟಿ - ಅಮೃತ್ಸರ
ಅಮೃತ್ಸರ (ಪಂಜಾಬ್):ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಮತ್ತು ಅವರ ಭಾವಿ ಪತ್ನಿ, ಬಾಲಿವುಡ್ ಚಿತ್ರನಟಿ ಪರಿಣಿತಿ ಚೋಪ್ರಾ ಇಂದು ಮುಂಜಾನೆ ಅಮೃತಸರ್ನ ಗುರುನಗರದ ಸಚ್‌ಖಂದ್ ಶ್ರೀ ಹರ್ಮಂದಿರ್ ಸಾಹಿಬ್‌ಗೆ ಭೇಟಿ ನೀಡಿದ್ದರು. ಗುರುಗಳ ಮನೆಯಲ್ಲಿ ದೇವರಿಗೆ ನಮಸ್ಕರಿಸಿ, ಹೊಸ ಜೀವನಕ್ಕೆ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನವಜೋಡಿ ಪ್ರಾರ್ಥಿಸಿದರು.
ಇದಾದ ಬಳಿಕ ಗುರುಘರ್‌ನಲ್ಲಿರುವ ಲಂಗರ್ ಹಾಲ್‌ನೊಳಗಿನ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಸೇವೆಯನ್ನೂ ಮಾಡಿದರು. ಈ ಸಂದರ್ಭದಲ್ಲಿ ಜೋಡಿಯ ಸುತ್ತ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ಅವರ ಬಳಿ ಹೋಗಲು ಯಾರಿಗೂ ಅವಕಾಶವಿರಲಿಲ್ಲ. ಅವರ ಸುತ್ತಲೂ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ್ದವು. ಹೀಗಾಗಿ ಮಾಧ್ಯಮದವರ ಯಾವ ಪ್ರಶ್ನೆಗೂ ಅವರಿಂದ ಉತ್ತರ ಸಿಗಲಿಲ್ಲ.
ಇದನ್ನೂ ಓದಿ:ಬಣ್ಣದ ಲೋಕದಲ್ಲಿ 23 ವರ್ಷ ಪೂರೈಸಿದ ಬೇಬೋ; ಕರೀನಾ ಕಪೂರ್ ಖಾನ್ ಬಗ್ಗೆ ನಿಮಗೆಷ್ಟು ಗೊತ್ತು?
ಮೇ ತಿಂಗಳಲ್ಲಿ ರಾಘವ್ ಮತ್ತು ಪರಿಣಿತಿ ದೆಹಲಿಯಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರದಲ್ಲೇ ರಾಜಸ್ಥಾನದ ಉದಯಪುರದಲ್ಲಿ ಹಸೆಮಣೆ ಏರಲಿದ್ದಾರೆ. ಇದೀಗ ಈ ಜೋಡಿಯ ಮದುವೆಯ ಕುರಿತು ಚರ್ಚೆ ಜೋರಾಗಿದೆ. ಇದೇ ವರ್ಷದೊಳಗೆ ಮದುವೆ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.