ಪುನೀತ್ ನಟ ಅಷ್ಟೇ ಆಗಿರಲಿಲ್ಲ, ಪರಿಸರ ಪ್ರೇಮಿ ಕೂಡ ಆಗಿದ್ದರು: ಅಪ್ಪು ಬಗ್ಗೆ ಪ್ರಕಾಶ್ ರೈ ಮಾತು - ಗಂಧದಗುಡಿ ಚಿತ್ರ ಬಿಡುಗಡೆ
ಅಪ್ಪು ನಮ್ಮನ್ನು ಅಗಲಿದ ಬಳಿಕ ನನಗೆ ನಾಲ್ಕಾರು ತಿಂಗಳು ನಿದ್ದೆಯೇ ಬರಲಿಲ್ಲ. ನನ್ನನ್ನು ಬಹಳ ಕಾಡಿದರು. ಹೀಗೆ ಆಲೋಚನೆಯಲ್ಲಿ ಮುಳುಗಿದ್ದಾಗ ಯಾವುದೋ ಮೂಲಕ ನನ್ನನ್ನು ಕೆಲಸ ಮಾಡುವಂತೆ ಪ್ರೇರೆಪಿಸಿದರು. ಆಗ ಹುಟ್ಟಿದ್ದೇ ಈ ಅಪ್ಪು ಎಕ್ಸ್ಪ್ರೆಸ್ ಆಂಬ್ಯುಲೆನ್ಸ್. ಬಡವರಿಗಾಗಿ 30 ಜಿಲ್ಲೆಗೂ ಒಂದೊಂದು ಅಪ್ಪು ಎಕ್ಸ್ಪ್ರೆಸ್ ಆಂಬ್ಯುಲೆನ್ಸ್ ನೀಡುವ ನನ್ನ ಈ ಸೇವೆಗೆ ಶಿವರಾಜ್ ಕುಮಾರ್, ತಮಿಳು ನಟ ಸೂರ್ಯ, ಟಾಲಿವುಡ್ ನಟ ಚಿರಂಜೀವಿ ಕೈಜೋಡಿಸಿದರು ಎಂದು ಅವರ ಸಹಾಯವನ್ನು ನಟ ಪ್ರಕಾಶ್ ರೈ ಸ್ಮರಿಸಿದರು. ಇದೇ ವೇಳೆ ಒಂದು ವರ್ಷ ಕಾಲ ಕಾಡು ಸುತ್ತಾಡಿದ ಪುನೀತ್ ರಾಜ್ಕುಮಾರ್ ಅವರ ಗಂಧದಗುಡಿ ಪ್ರಯಾಣದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದರು.
Last Updated : Feb 3, 2023, 8:29 PM IST