ಇಸ್ರೇಲ್ನಿಂದ ಭಾರತಕ್ಕೆ ಮರಳಿದ ನಟಿ.. ಮುಂಬೈ ಏರ್ಪೋರ್ಟ್ಗೆ ಬಂದಿಳಿದ ನುಶ್ರತ್ ಭರುಚಾ - ನುಶ್ರತ್ ಭರುಚಾ ಲೇಟೆಸ್ಟ್ ನ್ಯೂಸ್
Published : Oct 8, 2023, 5:31 PM IST
ಶನಿವಾರ ಇಸ್ರೇಲ್ ಮೇಲೆ ಪ್ಯಾಲೆಸ್ಟೇನ್ನ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. ಸಾಗರೋತ್ತರ ಪ್ರದೇಶದಲ್ಲಿ ಭಾರತೀಯ ನಟಿ ನುಶ್ರತ್ ಭರುಚಾ ಸಿಲುಕಿಕೊಂಡಿದ್ದರು. ಈ ವಿಚಾರ ತಿಳಿದ ಅಭಿಮಾನಿಗಳು ಬಹಳಾನೇ ಆತಂಕಕ್ಕೊಳಗಾಗಿದ್ದರು. ಅದೃಷ್ಟವಶಾತ್ ನಟಿ ಸುರಕ್ಷಿತವಾಗಿ ಭಾರತಕ್ಕೆ ಮರಳುತ್ತಿದ್ದಾರೆ ಎಂದು ನಟಿಯ ತಂಡ ಮಾಹಿತಿ ಕೊಟ್ಟಿತ್ತು. ಅಂತಿಮವಾಗಿ ಭರುಚಾ ದೇಶಕ್ಕೆ ಬಂದಿಳಿದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನುಶ್ರತ್ ಭರುಚಾ ಕಾಣಿಸಿಕೊಂಡಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 7 ರ ವರೆಗೆ ಆಯೋಜಿಸಲಾಗಿದ್ದ ಹೈಫಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿ ಆಗುವ ಸಲುವಾಗಿ ನಟಿ ಇಸ್ರೇಲ್ ದೇಶಕ್ಕೆ ತೆರಳಿದ್ದರು. ಆದ್ರೆ ಹಮಾಸ್ ಉಗ್ರರು ದಾಳಿ ನಡೆಸಿದ ಹಿನ್ನೆಲೆ, ಯುದ್ಧದ ವಾತಾವರಣ ನಿರ್ಮಾಣಗೊಂಡಿದೆ. ಸಾವು ನೋವಿನ ಸಂಖ್ಯೆ ಏರುತ್ತಿದೆ. ಆದ್ರೆ ರಾಯಭಾರ ಕಚೇರಿ ಸಹಾಯದಿಂದ ಭಾರತೀಯ ನಟಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ನುಶ್ರತ್ ಭರುಚಾ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಸೀಸನ್ 10: ಗ್ರ್ಯಾಂಡ್ ಈವೆಂಟ್ಗೆ ಕ್ಷಣಗಣನೆ - ಸ್ಪರ್ಧಿಗಳ್ಯಾರಿರಬಹುದು?