ಮುಖೇಶ್ ಅಂಬಾನಿ ಮೊಮ್ಮಕ್ಕಳ ಬರ್ತ್ಡೇ ಪಾರ್ಟಿಯಲ್ಲಿ ಖ್ಯಾತ ಸೆಲೆಬ್ರಿಟಿಗಳು ಭಾಗಿ - ವಿಡಿಯೋ - ನೀತಾ ಅಂಬಾನಿ
Published : Nov 18, 2023, 9:09 PM IST
|Updated : Nov 18, 2023, 9:21 PM IST
ಮುಂಬೈ: ಇಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವಳಿ ಮೊಮ್ಮಕ್ಕಳಾದ ಆದಿಯಾ ಮತ್ತು ಕೃಷ್ಣ ಜನ್ಮದಿನ. ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ದಂಪತಿ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಪಾರ್ಟಿ ಆಯೋಜಿಸಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ತಾರೆಯರು ಈವೆಂಟ್ಗೆ ಆಗಮಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮೊಮ್ಮಕ್ಕಳನ್ನು ಎತ್ತಿಕೊಂಡು ಕ್ಯಾಮರಾಗೆ ಪೋಸ್ ನೀಡಿರುವುದನ್ನು ವಿಡಿಯೋಗಳಲ್ಲಿ ಕಾಣಬಹುದು. ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ದಂಪತಿ ಜೊತೆಯಾಗಿ ಪಾರ್ಟಿಯತ್ತ ತೆರಳುತ್ತಿರುವುದನ್ನು ನೋಡಬಹುದು. ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮಿಬ್ಬರು ಮಕ್ಕಳಾದ ಯಶ್ ಮತ್ತು ರೂಹಿ ಜೊತೆ ಈವೆಂಟ್ಗೆ ಆಗಮಿಸಿದ್ದಾರೆ. ಇನ್ನೂ ಅನೇಕ ಗಣ್ಯರು ಪಾರ್ಟಿಗೆ ಬರುತ್ತಿದ್ದಾರೆ.
ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ 2018ರ ಸೆಪ್ಟೆಂಬರ್ ತಿಂಗಳಲ್ಲಿ ಇಟಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಡಿಸೆಂಬರ್ 12ರಂದು ದಾಂಪತ್ಯಕ್ಕೆ ಕಾಲಿಟ್ಟರು. 2022ರ ನವೆಂಬರ್ 18ರಂದು ಇಬ್ಬರು ಅವಳಿ ಮಕ್ಕಳನ್ನು ಸ್ವಾಗತಿಸಿದರು. ಹೆಣ್ಣು ಮಗುವಿಗೆ ಆದಿಯಾ ಮತ್ತು ಗಂಡು ಮಗುವಿಗೆ ಕೃಷ್ಣ ಎಂದು ನಾಮಕರಣ ಮಾಡಿದರು.
ಇದನ್ನೂ ಓದಿ:ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲದಲ್ಲಿ ಮುಖೇಶ್ ಅಂಬಾನಿ ಕುಟುಂಬದಿಂದ ಪೂಜೆ- ವಿಡಿಯೋ