ಕರ್ನಾಟಕ

karnataka

ರಿಷಬ್ ಶೆಟ್ಟಿಗೆ ಮೈಸಂದಾಯ ದೈವದ ಆಶೀರ್ವಾದ

ETV Bharat / videos

'ಭಯ ಪಡಬೇಡ, ಮುನ್ನುಗ್ಗು': ರಿಷಬ್ ಶೆಟ್ಟಿಗೆ ಮೈಸಂದಾಯ ದೈವದ ಅಭಯ - Maisandaya daiva

By ETV Bharat Karnataka Team

Published : Jan 6, 2024, 7:20 PM IST

Updated : Jan 6, 2024, 7:57 PM IST

ಮಂಗಳೂರು (ದಕ್ಷಿಣ ಕನ್ನಡ): ಕಾಂತಾರ ಭರ್ಜರಿ ಯಶಸ್ಸಿನ ಹಿನ್ನೆಲೆ ಚಿತ್ರದ ಮತ್ತೊಂದು ಭಾಗ ನಿರ್ಮಾಣಗೊಳ್ಳುತ್ತಿರೋದು ನಿಮಗೆ ತಿಳಿದಿರುವ ವಿಚಾರವೇ. ಕಾಂತಾರ ಪ್ರೀಕ್ವೆಲ್ ಮಾಡಲು ಹೊರಟಿರುವ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರು ಇತ್ತೀಚೆಗೆ ಗುರುಪುರ ವಜ್ರದೇಹಿ ಮಠದ ಜಾತ್ರೆಯ ಸಂದರ್ಭ ನಡೆದ ನೇಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮೈಸಂದಾಯ ದೈವ ಶೆಟ್ರಿಗೆ ಅಭಯ ನೀಡಿ, ಆಶೀರ್ವದಿಸಿದೆ.

ಗುರುಪುರ ವಜ್ರದೇಹಿ ಮಠದ ಜಾತ್ರೋತ್ಸವದ ಹಿನ್ನೆಲೆ, ನಿನ್ನೆ ರಾತ್ರೆ ಮೈಸಂದಾಯ ಹಾಗೂ ಲೆಕ್ಕೇಸಿರಿ ದೈವದ ನೇಮ ನಡೆದಿತ್ತು. ಈ ನೇಮದಲ್ಲಿ ರಿಷಬ್ ಶೆಟ್ಟಿ ಹಾಜರಾಗಿದ್ದರು. ಕಾಂತಾರ ಸಿನಿಮಾಗೆ ಮೈಸಂದಾಯ ದೈವ ಆಶೀರ್ವಾದಿಸಿ ಅಭಯ ನೀಡಿದೆ. ''ಯಾವುದಕ್ಕೂ ಭಯ ಪಡಬೇಡ, ಮುನ್ನುಗ್ಗು'' ಎಂದು ರಿಷಬ್ ಶೆಟ್ಟಿಯವರ ತಲೆಸವರಿ ದೈವ ಆಶೀರ್ವದಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ.  

ಇದನ್ನೂ ಓದಿ:ಅನಿಮಲ್ ಸಕ್ಸಸ್ ಸಂಭ್ರಮಕ್ಕಾಗಿ ​ಪುಷ್ಪ- 2ರಿಂದ ಬ್ರೇಕ್​ ಪಡೆದ ರಶ್ಮಿಕಾ ಮಂದಣ್ಣ

2022ರಲ್ಲಿ ಬಂದ ಕಾಂತಾರ ಸೂಪರ್ ಹಿಟ್​ ಆಗಿ ಬಾಕ್ಸ್ ಆಫೀಸ್​ನಲ್ಲಿ ಕೋಟಿ ಕೋಟಿ ಹಣ ಗಳಿಸಿತ್ತು. ಈ ಭರ್ಜರಿ ಯಶಸ್ಸಿನ ಹಿನ್ನೆಲೆ ಚಿತ್ರದ ಮತ್ತೊಂದು ಭಾಗ ನಿರ್ಮಾಣಗೊಳ್ಳುತ್ತಿದೆ. ಬಹುತೇಕ ಇದೇ ಸಾಲಿನಲ್ಲಿ ಸಿನಿಮಾ ತೆರೆಕಾಣಲಿದೆ. 

Last Updated : Jan 6, 2024, 7:57 PM IST

ABOUT THE AUTHOR

...view details