ಸಿದ್ಧಾರ್ಥ್ - ಕಿಯಾರ ಮದುವೆ: ರಾಜಸ್ಥಾನಕ್ಕೆ ಆಗಮಿಸಿದ ವಧು ಅಡ್ವಾಣಿ - ಕಿಯಾರಾ ಅಡ್ವಾಣಿ ಫೋಟೋ
ಫೆಬ್ರವರಿ 6ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಹಸೆಮಣೆ ಏರಲಿದ್ದಾರೆ. ಜೈಸಲ್ಮೇರ್ನ ಸೂರ್ಯಗಢ್ ಅರಮನೆಯಲ್ಲಿ ವಿವಾಹ ಸಮಾರಂಭ ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆಗಳು ನಡೆದಿದೆ. ಇಂದು ವಧು ಕಿಯಾರಾ ಅಡ್ವಾಣಿ ರಾಜಸ್ಥಾನಕ್ಕೆ ಆಗಮಿಸಿದ್ದಾರೆ.
ನಟಿ ಕಿಯಾರಾ ಅಡ್ವಾಣಿ ರಾಜಸ್ಥಾನಕ್ಕೆ ಆಗಮಿಸಿದ್ದು, ಜೈಸಲ್ಮೇರ್ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಕಿಯಾರಾ ಮೊಗದಲ್ಲಿ ವಧುವಿನ ಕಳೆ ಎದ್ದು ಕಾಣುತ್ತಿತ್ತು. ಸಂಪೂರ್ಣ ಬಿಳಿ ಉಡುಪಿನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಈ ವಿಡಿಯೋ ವೈರಲ್ ಆಗಿದ್ದು, ಬಾಲಿವುಡ್ ತಾರೆಗಳ ಮದುವೆ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.
ಕಿಯಾರಾ ಅಡ್ವಾನಿ ಅವರೊಂದಿಗೆ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಸಹ ಇದ್ದರು. ಕಿಯಾರಾ ಅಡ್ವಾಣಿಗೂ ಮೊದಲು, ಬಾಲಿವುಡ್‌ನ ಮೆಚ್ಚಿನ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಕೂಡ ಮುಂಬೈನಿಂದ ಜೈಸಲ್ಮೇರ್‌ಗೆ ಆಗಮಿಸಿದ್ದಾರೆ. ವಧುವಿನ ಕೈಗಳಿಗೆ ಇವರೇ ಮೆಹೆಂದಿ ಇಡಲಿದ್ದಾರೆ.
ಇದನ್ನೂ ಓದಿ:ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಮದುವೆ ಸಂಭ್ರಮ: ನಾಳೆ ಅರಮನೆ ತಲುಪಲಿರುವ ಜೋಡಿ