ಹೊಸ ವರ್ಷದ ಸಂಭ್ರಮದಲ್ಲಿ ವಿಕ್ಕಿ- ಕತ್ರಿನಾ.. ರಾಜಸ್ಥಾನದಲ್ಲಿ ಬಾಲಿವುಡ್ ಜೋಡಿ! - ಚಿರತೆ ಅಭಯಾರಣ್ಯ
ಬಾಲಿವುಡ್ನ ಸುಂದರ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಸೋಮವಾರ ಜೋಧ್‌ಪುರಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಅವರು ನೇರವಾಗಿ ಪಾಲಿ ಜಿಲ್ಲೆಯ ಜವಾಯಿ ಅಣೆಕಟ್ಟಿಗೆ ತೆರಳಿದರು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರು, ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಜೊತೆಗೆ ಈ ವೇಳೆ ಕತ್ರಿನಾ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡರು. ಮಾಹಿತಿಗಳ ಪ್ರಕಾರ ಇವರಿಬ್ಬರು ಕೆಲವು ದಿನಗಳ ಕಾಲ ಸುತ್ತಾಡಲು ರಾಜಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಾಲಾಗುತ್ತಿದೆ. ಹಾಗೆ ಅವರು ಚಿರತೆ ಅಭಯಾರಣ್ಯದ ಬಳಿ ನೆಲೆಸಲಿದ್ದು, ನಂತರ ಉದಯಪುರ ಅಥವಾ ಜೈಸಲ್ಮೇರ್‌ಗೆ ಹೋಗಬಹುದು ಎನ್ನಲಾಗಿದೆ. ಇನ್ನೂ ಎಲ್ಲರಿಗೂ ತಿಳಿದಿರುವಂತೆ, ಕಳೆದ ವರ್ಷ ಡಿಸೆಂಬರ್ 9 ರಂದು ಈ ಜೋಡಿಗಳು ರಾಜಸ್ಥಾನದಲ್ಲಿ ವಿವಾಹವಾದಗಿದ್ದರು. ಮದುವೆಯಾಗಿ ಒಂದು ವರ್ಷ ಕಳೆದ ನಂತರ ಇಬ್ಬರು ಮತ್ತೆ ರಾಜಸ್ಥಾನಕ್ಕೆ ಭೇಟಿ ನೀಡಿದ್ದಾರೆ.
Last Updated : Feb 3, 2023, 8:37 PM IST