ಗೆಳೆಯನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್ - ತಿರುಪತಿಯಲ್ಲಿ ಜಾನ್ವಿ ಕಪೂರ್
Published : Jan 5, 2024, 1:03 PM IST
ತಿರುಪತಿ (ಆಂಧ್ರಪ್ರದೇಶ):ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇಂದು ತಿರುಪತಿ ವೆಂಕಟೇಶ್ವರನ ಸನ್ನಿಧಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಬಾಲಿವುಡ್ ತಾರೆ ಜೊತೆ ವದಂತಿಯ ಗೆಳೆಯ ಶಿಖರ್ ಪಹಾರಿಯಾ ಮತ್ತು ಚಿಕ್ಕಮ್ಮ ಮಹೇಶ್ವರಿ ಇದ್ದರು. 'ಕಾಫಿ ವಿತ್ ಕರಣ್ ಸೀಸನ್ 8'ರಲ್ಲಿ ಶಿಖರ್ ಪಹಾರಿಯಾ ಜೊತೆಗಿನ ಸಂಬಂಧವನ್ನು ಪರೋಕ್ಷವಾಗಿ ದೃಢಪಡಿಸಿದ ಬೆನ್ನಲ್ಲೇ ಜಾಹ್ನವಿ ಕಪೂರ್ ಗೆಳೆಯನ ಜೊತೆ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ, ಇದಕ್ಕೂ ಮುನ್ನ ಕೆಲವು ಸಲ ತಿರುಪತಿಗೆ ಬಂದಿದ್ದರು.
ಮುಂಜಾನೆಯ ಪೂಜಾ ವಿಧಿ- ವಿಧಾನಗಳಲ್ಲಿ ಇಬ್ಬರೂ ಭಾಗಿಯಾದರು. ದೇವರ ದರ್ಶನ ಪಡೆದು ತೆರಳಿದ್ದಾರೆ. ನಟಿ ಗೋಲ್ಡನ್ ಕಲರ್ ಸೀರೆ ಧರಿಸಿದ್ದು, ಶಿಖರ್ ಧೋತಿಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರು. ಜಾಹ್ನವಿ ಆಗಾಗ್ಗೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಹಿಂದೆ 2023ರ ಆಗಸ್ಟ್ನಲ್ಲಿ ಆಗಮಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡ ನಟಿ, ''ಈಗ 2024 ಪ್ರಾರಂಭವಾದಂತೆ ಭಾಸವಾಗುತ್ತಿದೆ. ಗೋವಿಂದ, ಗೋವಿಂದಾ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:'ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಉಡುಗೊರೆ': ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಯಶ್ ಮನವಿ