ಕರ್ನಾಟಕ

karnataka

ಹೃತಿಕ್ ಜೊತೆ ಬಂದ ಗೆಳತಿ ಸಬಾ; ಮೇರಿ ಕ್ರಿಸ್ಮಸ್​ ಪ್ರಚಾರಕ್ಕೊರಟ ಕತ್ರಿನಾ

ETV Bharat / videos

ಹೃತಿಕ್ ಜೊತೆ ಬಂದ ಗೆಳತಿ ಸಬಾ; ಮೇರಿ ಕ್ರಿಸ್ಮಸ್​ ಪ್ರಚಾರಕ್ಕೆ ಹೊರಟ ಕತ್ರಿನಾ - ವಿಡಿಯೋ - ಸಬಾ ಅಜಾದ್

By ETV Bharat Karnataka Team

Published : Jan 6, 2024, 7:54 PM IST

ಮುಂಬೈ (ಮಹಾರಾಷ್ಟ್ರ): ಹೃತಿಕ್ ರೋಷನ್, ಗೆಳತಿ ಸಬಾ ಅಜಾದ್ ಶನಿವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ವರ್ಷವನ್ನು ಒಟ್ಟಿಗೆ ಬರಮಾಡಿಕೊಂಡ ಈ ಜೋಡಿ ಇಂದು ನಗರಕ್ಕೆ ವಾಪಸಾಗಿದ್ದಾರೆ. ಕತ್ರಿನಾ ಕೈಫ್ ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ಮೇರಿ ಕ್ರಿಸ್ಮಸ್​ನ ಪ್ರಚಾರಕ್ಕಾಗಿ ಹೊರಟಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

ಬಾಲಿವುಡ್​ ನಟ ಹೃತಿಕ್ ರೋಷನ್​​ ಬ್ಲ್ಯಾಕ್​ ಫುಲ್​ ಸ್ಲೀವ್ ಟೀ-ಶರ್ಟ್, ಬ್ಲ್ಯೂ ಡೆನಿಮ್​ನಲ್ಲಿ ಕಾಣಿಸಿಕೊಂಡರು. ಸಬಾ ಅಜಾದ್​ ಕೂಡ ಕಂಪ್ಲೀಟ್​ ಬ್ಲ್ಯಾಕ್​​ ಕ್ಯಾಶುವಲ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಮುಂಬೈ ವಿಮಾನ ನಿಲ್ದಾಣದಲ್ಲೇ ಕತ್ರಿನಾ ಕೈಫ್ ಕೂಡ ಕಾಣಿಸಿಕೊಂಡಿದ್ದಾರೆ. ಜೀನ್ಸ್​, ಬ್ಲ್ಯಾಕ್​ ಆ್ಯಂಡ್​ ವೈಟ್ ಟಾಪ್, ಬ್ಲ್ಯೂ ಡೆನಿಮ್ ಧರಿಸಿ ಬಂದಿದ್ದರು. ಮೇಕಪ್​​ ಇಲ್ಲದೇ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ಕತ್ರಿನಾ ಕೈಫ್​ - ವಿಜಯ್​ ಸೇತುಪತಿ ಸ್ಕ್ರೀನ್​ ಶೇರ್ ಮಾಡಿದ್ದು, ಜನವರಿ 12 ರಂದು ಸಿನಿಮಾ ಬಿಡುಗಡೆ ಆಗಲಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. 

ಇದನ್ನೂ ಓದಿ:ಮೇರಿ ಕ್ರಿಸ್ಮಸ್: ವಿಜಯ್​ ಸೇತುಪತಿ ಪಾತ್ರಕ್ಕೆ ಮೊದಲ ಆಯ್ಕೆ ಸೈಫ್ ಅಲಿ ಖಾನ್

ABOUT THE AUTHOR

...view details