ಕರ್ನಾಟಕ

karnataka

ಗಬ್ಬೂರು ಶ್ರೀಬೂದಿ ಬಸವೇಶ್ವರ ಜಾತ್ರಾ ಮಹೋತ್ಸವ

ETV Bharat / videos

ಗಬ್ಬೂರು ಶ್ರೀಬೂದಿ ಬಸವೇಶ್ವರ ಜಾತ್ರೋತ್ಸವ: ದಾಂಪತ್ಯಕ್ಕೆ ಕಾಲಿಟ್ಟ 175 ಜೋಡಿ - ಶ್ರೀಬೂದಿ ಬಸವೇಶ್ವರ ಸ್ವಾಮಿ

By

Published : Feb 2, 2023, 11:00 PM IST

Updated : Feb 3, 2023, 8:40 PM IST

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಶ್ರೀಬೂದಿ ಬಸವೇಶ್ವರ ಮಠದ ಆವರಣದಲ್ಲಿ ಶ್ರೀಬೂದಿ ಬಸವೇಶ್ವರ ರಥೋತ್ಸವ ಸಂಭ್ರಮದಿಂದ ನೆರವೇರಿತು. ಶ್ರೀಮಠದಲ್ಲಿ ಜಾತ್ರೆಯ ಪ್ರಯುಕ್ತ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. 175ಕ್ಕೂ ಹೆಚ್ಚು ಜೋಡಿಗಳು ನವದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇವಾಲಯದಲ್ಲಿ ಬೆಳಗ್ಗೆ ಶ್ರೀಬೂದಿ ಬಸವೇಶ್ವರ ಸ್ವಾಮಿಗೆ ವಿವಿಧ ಪೂಜೆಗಳು ಜರುಗಿದವು. ಸಂಜೆ ವಿವಿಧ ವಾದ್ಯಗಳೊಂದಿಗೆ ಮಹಾರಥೋತ್ಸವ ನಡೆಯಿತು. ಸುತ್ತೂರು ಮಠದ ಶ್ರೀಗಳು ಸೇರಿದಂತೆ ರಾಜಕೀಯ ಗಣ್ಯರು ಭಾಗವಹಿಸಿದ್ದರು. ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಇದನ್ನೂಓದಿ:ಸಗರ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ; ಮನಸೆಳೆದ ಜಗಜಟ್ಟಿಗಳ ಕಾಳಗ

Last Updated : Feb 3, 2023, 8:40 PM IST

ABOUT THE AUTHOR

...view details