'ದೇಸಾಯಿ' ಚಿತ್ರಕ್ಕಾಗಿ ಬಣ್ಣ ಹಚ್ಚಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ - ಲವ್ 360 ಖ್ಯಾತಿಯ ಪ್ರವೀಣ ನಾಯಕ ನಟ
Published : Oct 2, 2023, 9:30 PM IST
ಬಾಗಲಕೋಟೆ:ಚಿತ್ರರಂಗ ಮತ್ತು ರಾಜಕೀಯದ ಮಧ್ಯೆ ನಂಟಿದೆ. ಸಿನಿಮಾದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು, ಪಾಲಿಟಿಕ್ಸ್ನಿಂದ ಬಂದು ಬಣ್ಣದ ಲೋಕದಲ್ಲಿ ಮಿಂಚಿದವರು ಅನೇಕರು. ಇದೀಗ ಆ ಸಾಲಿಗೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿಕೊಂಡಿದ್ದಾರೆ. 'ದೇಸಾಯಿ' ಎಂಬ ಕನ್ನಡ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ನಡೆಯುತ್ತಿರುವ 'ದೇಸಾಯಿ' ಚಿತ್ರದ ಶೂಟಿಂಗ್‌ನಲ್ಲಿ ಸವದಿ ಪಾಲ್ಗೊಂಡಿದ್ದಾರೆ. ಚಿತ್ರದಲ್ಲಿ ಕುಸ್ತಿ ಪಟುವನ್ನು ಪ್ರಶಸ್ತಿ ನೀಡಿ ಹುರಿದುಂಬಿಸುವ ಗೆಸ್ಟ್ ರೋಲ್ ಮಾಡಿದ್ದಾರೆ. ಚಿತ್ರವನ್ನು ನಾಗಿರೆಡ್ಡಿ ನಿರ್ದೇಶನ ಮಾಡಿದ್ದು, ಮಹಾಂತೇಶ್ ಚೊಳಚಗುಡ್ಡ ನಿರ್ಮಿಸಿದ್ದಾರೆ. ಲವ್ 360 ಖ್ಯಾತಿಯ ಪ್ರವೀಣ ನಾಯಕ ನಟ.
'ದೇಸಾಯಿ'ಯಲ್ಲಿ ನಟಿಸಿದ್ದರ ಬಗ್ಗೆ ಸಂತಸ ಹಂಚಿಕೊಂಡ ಲಕ್ಷ್ಮಣ ಸವದಿ, "ಇದೊಂದು ಸಣ್ಣ ಪಾತ್ರವಾದರೂ, ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ನಟನೆ ಮಾಡಿದ್ದೇನೆ. ಒಬ್ಬ ಕುಸ್ತಿ ಪಟುವಿಗೆ ಪ್ರಶಸ್ತಿ ಪ್ರದಾನ ಮಾಡುವ ಪಾತ್ರವಿದು. ಮೊದಲ ಬಾರಿ ಕ್ಯಾಮರಾ ಮುಂದೆ ನಿಂತಿದ್ದು ಖುಷಿಯಾಯಿತು. ಜೀವನದಲ್ಲಿ ಹೊಸ ಅನುಭವ ಸಿಕ್ಕಿದೆ" ಎಂದು ಹೇಳಿದರು.
ಇದನ್ನೂ ಓದಿ:'ಗಜರಾಮ' ರಾಜವರ್ಧನ್ ಜೊತೆ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ ರಾಗಿಣಿ ದ್ವಿವೇದಿ