ಕರ್ನಾಟಕ

karnataka

ETV Bharat / videos

ಐಷಾರಾಮಿ ಕಾರು ಬಿಟ್ಟು ಆಟೋ ಏರಿದ ದುನಿಯಾ ವಿಜಯ್ - dunia Vijay latest news

By

Published : Nov 17, 2022, 7:28 PM IST

Updated : Feb 3, 2023, 8:32 PM IST

ಬೆಂಗಳೂರು: ಭೀಮ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ದುನಿಯಾ ವಿಜಯ್​​ ಆಟೋದಲ್ಲಿ ಓಡಾಡುವ ಮೂಲಕ ಒಂದೊಳ್ಳೆ ಕೆಲಸಕ್ಕೆ ಕೈ ಜೋಡಿಸಿದ್ದಾರೆ‌. ‌ಹೌದು, ದುನಿಯಾ ವಿಜಯ್ ಆಟೋದಲ್ಲಿ ಸಂಚಾರ ಮಾಡಿ, ರ‍್ಯಾಪಿಡೋ ಲೀಗಲ್ ಮಾಡಿ. ಅವರ ಬಳಿ ತೆರಿಗೆ ಕಟ್ಟಿಸಿಕೊಳ್ಳಿ. ಆಟೋದಲ್ಲಿ ಓಡಾಡೋ ಜನರಿಗೆ ಸುರಕ್ಷತೆ ನೀಡಿ. ಅಲ್ಲಿಯವರೆಗೆ ಆಟೋದವರಿಗೆ ಬೆಂಬಲ ನೀಡಿ ಅಂತ ಸಲಗ ವಿಜಯ್ ಮನವಿ ಮಾಡಿದ್ದಾರೆ. ವಿಜಯ್ ಆಟೋದಲ್ಲಿ ಪ್ರಯಾಣ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿದೆ‌. ಇನ್ನು ತೆಲುಗು ನಟ ಬಾಲಯ್ಯ ಅವರ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಖಡಕ್ ವಿಲನ್‌ ಪಾತ್ರ ಮಾಡಿರೋ ವಿಜಯ್ ಲುಕ್ ಕೂಡ ಬಹಳ ವಿಭಿನ್ನವಾಗಿದ್ದು, ಅವರ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
Last Updated : Feb 3, 2023, 8:32 PM IST

ABOUT THE AUTHOR

...view details