ಕರ್ನಾಟಕ

karnataka

ನಿರ್ದೇಶಕ ಎಸ್. ನಾರಾಯಣ್

ETV Bharat / videos

'ಕಾಂಗ್ರೆಸ್​​ ಗೆಲ್ಲಬೇಕು, ಧ್ರುವನಾರಾಯಣ್​ ಆತ್ಮಕ್ಕೆ ಶಾಂತಿ ಸಿಗಬೇಕು': ದರ್ಶನ್​ಗೆ ಎಸ್​. ನಾರಾಯಣ್ ಬೆಂಬಲ - congress candidate dhruva narayan

By

Published : Apr 11, 2023, 6:57 PM IST

ಮೈಸೂರು:‌ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರಿಗೆ ನಿರ್ದೇಶಕ ಎಸ್. ನಾರಾಯಣ್ ಬೆಂಬಲ ಸೂಚಿಸಿದ್ದಾರೆ. ನಂಜನಗೂಡು ನಗರಕ್ಕೆ ಆಗಮಿಸಿದ ನಿರ್ದೇಶಕ ಎಸ್. ನಾರಾಯಣ್ ಅವರು ದರ್ಶನ್ ಧ್ರುವನಾರಾಯಣ್ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ. 

ಬಳಿಕ ಮಾತನಾಡಿದ ಎಸ್​. ನಾರಾಯಣ್​​, ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ದರ್ಶನ್ ಧ್ರುವನಾರಾಯಣ್ ಅವರ ಪರ ನಾನು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಅವರ ಬೆನ್ನೆಲುಬಾಗಿ ನಾವು ನಿಲ್ಲಬೇಕು. ದೊಡ್ಡ ಮಟ್ಟದಲ್ಲಿ ಅವರು ಗೆದ್ದು ಬರಬೇಕು. ನಾನೇ ಸ್ವತಃ ಅವರಿಗೆ ಕರೆ ಮಾಡಿ ಬಂದೆ. ನಮ್ಮಿಂದ ಅವರಿಗೆ ನೂರು ಮತವಾದರೂ ಬರಲಿ. ಅವರು ದಿನಾಂಕ ನಿಗದಿ ಮಾಡಿದರೆ ಚುನಾವಣಾ ಪ್ರಚಾರ ನಡೆಸಿಕೊಡುತ್ತೇನೆ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಧ್ರುವನಾರಾಯಣ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು. ಇನ್ನು ಎಸ್.ನಾರಾಯಣ್ ಕಂಡು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದಿರು. ನಿರ್ದೇಶಕರು ಇವರಿಂದ ತಪ್ಪಿಸಿಕೊಂಡು ಓಡಿ ಹೋಗಿ ಕಾರು ಹತ್ತಿದ್ದಾರೆ.

ಇದನ್ನೂ ಓದಿ:ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​​​ ಮೊರೆ ಹೋದ ಕಿಚ್ಚ ಸುದೀಪ್

ABOUT THE AUTHOR

...view details