ದಿಂಬಂ ಘಟ್ಟದಲ್ಲಿ ಹೊತ್ತಿ ಉರಿದ ಕಾರು: ನಾಲ್ವರು ಅಪಾಯದಿಂದ ಪಾರು - Chamarajanagar
ಚಾಮರಾಜನಗರ: ಮೈಸೂರಿನಿಂದ ತಮಿಳುನಾಡಿಗೆ ತೆರಳುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಹಮ್ಮದ್ ಎಂಬುವವರ ಕುಟುಂಬಸ್ಥರು ತಮಿಳುನಾಡಿನ ಸತ್ಯಮಂಗಲಂಗೆ ತೆರಳುವಾಗ ದಿಂಬಂ ಘಟ್ಟ ಪ್ರದೇಶದ 23 ನೇ ತಿರುವಿನಲ್ಲಿ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಆಸನೂರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.
Last Updated : Feb 3, 2023, 8:25 PM IST