ನಿರ್ಮಾಪಕ ರಮೇಶ್ ತೌರಾನಿ ಮಗಳ ಮದುವೆ ಆರತಕ್ಷತೆ: ಬಾಲಿವುಡ್ ತಾರೆಗಳ ಮೆರುಗು - ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹ ಆರತಕ್ಷತೆ
ಚಿತ್ರ ನಿರ್ಮಾಪಕ ರಮೇಶ್ ತೌರಾನಿ ಪುತ್ರಿ ರವೀನಾ ತೌರಾನಿ ಅವರು ಅಪೂರ್ವ್ ಸೂದ್ ಅವರನ್ನು ಮದುವೆಯಾಗಿದ್ದಾರೆ. ಮಂಗಳವಾರ ರಾತ್ರಿ ಮುಂಬೈನಲ್ಲಿ ಅದ್ಧೂರಿ ವಿವಾಹ ಆರತಕ್ಷತೆ ನಡೆಯಿತು. ಕುಟುಂಬ ಸದಸ್ಯರು, ಆಪ್ತರ ಸಮ್ಮುಖದಲ್ಲಿ ಸಮಾರಂಭ ನೆರವೇರಿದ್ದು, ಬಾಲಿವುಡ್ ಸ್ಟಾರ್ಗಳು ಭಾಗವಹಿಸಿದ್ದರು. ಆಯುಷ್ಮಾನ್ ಖುರಾನಾ, ರವೀನಾ ಟಂಡನ್, ಗೋವಿಂದ, ಚುಂಕಿ ಪಾಂಡೆ, ಸುನೀಲ್ ಶೆಟ್ಟಿ ಮತ್ತು ಅವರ ಪುತ್ರ ಅಹಾನ್ ಶೆಟ್ಟಿ, ಶರ್ವರಿ ವಾಘ್ ಆಗಮಿಸಿದ್ದರು.
ಸೆಲೆಬ್ರಿಟಿಗಳ ಗದ್ದಲದ ನಡುವೆ ಸೋನಾಕ್ಷಿ ಸಿನ್ಹಾ ಅವರು ತಮ್ಮ ವದಂತಿಯ ಗೆಳೆಯ ಜಹೀರ್ ಇಕ್ಬಾಲ್ ಅವರೊಂದಿಗೆ ಆಗಮಿಸಿದ್ದು ಗಮನ ಸೆಳೆಯಿತು. ಪ್ರೇಮಪಕ್ಷಿಗಳು ತಮ್ಮ ಕಾಮನ್ ಫ್ರೆಂಡ್ ಹುಮಾ ಖುರೇಷಿ ಮತ್ತು ಆಯುಷ್ಮಾನ್ ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಸಮಾರಂಭದಲ್ಲಿ ಕಿರಣ್ ರಾವ್ ಮತ್ತು ಸೋಫಿ ಚೌದ್ರಿ, ಆಕಾಂಶಾ ರಂಜನ್ ಕಪೂರ್, ಅನುಷ್ಕಾ ರಂಜನ್ ಮತ್ತು ಅವರ ಪತಿ ಆದಿತ್ಯ ಸೀಲ್ ಕೂಡ ಆರತಕ್ಷತೆಯಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ:ವಿವಾಹ ಸಂಭ್ರಮದಲ್ಲಿ 'ಚಕ್ ದೇ ಇಂಡಿಯಾ' ನಟಿ: ಚಿತ್ರಾಶಿ ರಾವತ್ ನಿಶ್ಚಿತಾರ್ಥದ ವಿಡಿಯೋ ಇಲ್ಲಿದೆ