'ಗದರ್-2' ಸಕ್ಸಸ್ ಪಾರ್ಟಿ: ಶಾರುಖ್, ಅಮೀರ್ ಸೇರಿ ತಾರೆಯರ ಸಮಾಗಮ- ವಿಡಿಯೋ ನೋಡಿ - ಅನುಪಮ್ ಖೇರ್
Published : Sep 3, 2023, 1:15 PM IST
ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ, ಬಾಕ್ಸ್ ಆಫೀಸ್ನಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಬಾಲಿವುಡ್ ಸಿನಿಮಾ 'ಗದರ್ 2'. ಸಿನಿಮಾ ಗೆದ್ದ ಖುಷಿಯಲ್ಲಿ ಚಿತ್ರತಂಡ ಶನಿವಾರ ಸಂಜೆ ಮುಂಬೈನಲ್ಲಿ ಸಕ್ಸಸ್ ಸೆಲಬ್ರೇಶನ್ ಹಮ್ಮಿಕೊಂಡಿತ್ತು. ಈವೆಂಟ್ನಲ್ಲಿ ಬಾಲಿವುಡ್ನ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.
'ಜವಾನ್' ಮೂಲಕ ಸುದ್ದಿಯಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರು ಪತ್ನಿ ಗೌರಿ ಕೈ ಹಿಡಿದು ಕಾಣಿಸಿಕೊಂಡರೆ, ಅಮೀರ್ ಖಾನ್ ಬ್ಲ್ಯಾಕ್ ಟೀ ಶರ್ಟ್ ಮತ್ತು ವೈಟ್ ಡೆನಿಮ್ನಲ್ಲಿ ಕೂಲ್ ಆಗಿ ದರ್ಶನ ಕೊಟ್ಟರು. ಹಿರಿಯ ನಟ ಅನುಪಮ್ ಖೇರ್, ನಿರ್ಮಾಪಕ ಸಾಜಿದ್ ಖಾನ್ ಸೇರಿದಂತೆ ಚಿತ್ರರಂಗದ ಯುವನಟರು ಕಾರ್ಯಕ್ರಮದಲ್ಲಿ ಕಂಡುಬಂದರು.
ಇದನ್ನೂ ಓದಿ:ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್' ರಿಲೀಸ್ ಮುಂದೂಡಿಕೆ...ತರಣ್ ಆದರ್ಶ್ ಟ್ವೀಟ್ನಲ್ಲೇನಿದೆ?
ಅನಿಲ್ ಶರ್ಮಾ ನಿರ್ದೇಶನದ 'ಗದರ್ 2' ಸಿನಿಮಾ 2001ರ 'ಗದರ್: ಏಕ್ ಪ್ರೇಮ್ ಕಥಾ' ಸಿನಿಮಾದ ಮುಂದುವರಿದ ಭಾಗ. ಆಗಸ್ಟ್ 11ರಂದು ತೆರೆಕಂಡ ಸಿನಿಮಾ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ಸು ಕಂಡಿದೆ. ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಶೀಘ್ರದಲ್ಲೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂ. ಕ್ಲಬ್ ಸೇರುವ ನಿರೀಕ್ಷೆ ಇದೆ.