ನನ್ನನ್ನು ದುಬೈ ಪೊಲೀಸರು ಜೈಲಿಗೆ ಹಾಕಲೆಂದು ಅವರು ಬಯಸಿದ್ದರು: ಉರ್ಫಿ ಜಾವೇದ್ - ಉರ್ಫಿ ಜಾವೇದ್ ಹಾಟ್ ಫೋಟೋ
ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಮತ್ತೆ ಸಖತ್ ಸುದ್ದಿಯಲ್ಲಿದ್ದಾರೆ. ನಟಿಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ಅರೆಸ್ಟ್ ಆಗಿದ್ದು ಒಂದು ವಿಷಯವಾದರೆ, ಉರ್ಫಿಯೇ ದುಬೈನಲ್ಲಿ ಅರೆಸ್ಟ್ ಆಗಿದ್ದಾರೆಂಬುದು ಮತ್ತೊಂದು ವಿಷಯ. ಈ ಬಗ್ಗೆ ಉರ್ಫಿ ಜಾವೇದ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಎರಡೂ ಸುದ್ದಿಗಳು ಏಕಕಾಲದಲ್ಲಿ ಟ್ರೆಂಡಿಂಗ್ ಆಗಿದ್ದರೂ, ಜನರು ತನಗೆ ಬೆದರಿಕೆ ಹಾಕಿದ ವ್ಯಕ್ತಿಯ ಬಗ್ಗೆ ಕನಿಷ್ಠ ಆಸಕ್ತಿ ಹೊಂದಿದ್ದರು. ಆದರೆ ದುಬೈ ಪೊಲೀಸರು ನನ್ನನ್ನು ಜೈಲಿನಲ್ಲಿಡಬೇಕೆಂದು ಬಹುತೇಕ ನೆಟ್ಟಿಗರು ಬಯಸಿದ್ದರು. ಆದರೆ ನಾನು ಯಾವುದೇ ನಕಾರಾತ್ಮಕತೆಯಿಂದ ವಿಚಲಿತಳಾಗಿಲ್ಲ. ತನ್ನದೇ ಆದ ರೀತಿಯಲ್ಲಿ ತನ್ನ ಜೀವನ ಮುಂದುವರಿಸುತ್ತೇನೆ ಎಂದು ದ್ವೇಷಿಗರಿಗೆ ನಟಿ ಖಡಕ್ ತಿರುಗೇಟು ಕೊಟ್ಟಿದ್ದಾರೆ.
Last Updated : Feb 3, 2023, 8:36 PM IST