ಸಿನಿಮಾ ವಿಚಾರಕ್ಕೆ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ನಟಿ ಪ್ರಿಯಾಂಕಾ ಉಪೇಂದ್ರ - ಶಿಕ್ಷಣ ಸಚಿವ ಬಿಸಿ ನಾಗೇಶ್
ಬೆಂಗಳೂರು: ನಟಿ ಪ್ರಿಯಾಂಕಾ ಉಪೇಂದ್ರ ಅವರು ಸಿನಿಮಾ ವಿಚಾರಕ್ಕೆ ವಿಧಾನಸೌಧಕ್ಕೆ ಆಗಮಿಸಿದ ವೇಳೆ ವಿಧಾನಸೌಧದ ಸಿಬ್ಬಂದಿ ಸೆಲ್ಫಿಗೆ ಮುಗಿಬಿದ್ದ ಪ್ರಸಂಗ ಇಂದು ನಡೆಯಿತು. ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರನ್ನು ಭೇಟಿ ಮಾಡಲು ಪ್ರಿಯಾಂಕಾ ಉಪೇಂದ್ರ ಆಗಮಿಸಿದ್ದರು. ಆ ವೇಳೆ, ಕೆಂಗಲ್ ಗೇಟ್ ಬಳಿ ಸಿಬ್ಬಂದಿಗಳು ನಟಿಯ ಜೊತೆ ಸೆಲ್ಫಿ ತೆಗೆದುಕೊಂಡರು. ಸಚಿವರ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ ಅವರು, ಮಿಸ್ ನಂದಿನಿ ಚಿತ್ರದ ವಿಚಾರವಾಗಿ ಶಿಕ್ಷಣ ಸಚಿವರನ್ನು ಭೇಟಿ ಮಾಡಲು ಬಂದಿದ್ದೆ. ಸರ್ಕಾರಿ ಶಾಲೆ ಉಳಿಸುವ, ಸಾಮಾಜಿಕ ಕಳಕಳಿ ಇರುವ ಚಿತ್ರ ಇದು. ಶಾಲಾ ಮಕ್ಕಳಿಗೆ ಸಿನಿಮಾ ತೋರಿಸಿದರೆ ಚೆನ್ನಾಗಿರುತ್ತದೆಂದು ಮನವಿ ಮಾಡಲು ಬಂದಿದ್ದೆ. ಸರ್ಕಾರಿ ಶಾಲಾ ಮಕ್ಕಳು ನೋಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ:'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರ ಪ್ರೀತಿ-ಪ್ರೇಮದೊಂದಿಗೆ ಒಲವಾಗುವಂತೆ ಮಾಡುತ್ತೆ: ರಮ್ಯಾ