'ತೇಜಸ್' ಬಿಡುಗಡೆಗೂ ಮುನ್ನ ಅಯೋಧ್ಯೆಗೆ ಭೇಟಿ ನೀಡಿದ ನಟಿ ಕಂಗನಾ ರಣಾವತ್ - ಈಟಿವಿ ಭಾರತ ಕನ್ನಡ
Published : Oct 26, 2023, 4:42 PM IST
ಅಯೋಧ್ಯೆ (ಉತ್ತರ ಪ್ರದೇಶ): ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ 'ತೇಜಸ್' ಸಿನಿಮಾ ನಾಳೆ (ಅ.27) ಬಿಡುಗಡೆಯಾಗಲಿದೆ. ಈ ನಿಮಿತ್ತ ಅವರು ಇಂದು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ರಾಮಮಂದಿರವನ್ನು ಅವರು ವೀಕ್ಷಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಂಗನಾ, "ಕೊನೆಗೂ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದು ಹಿಂದೂಗಳ ಶತಮಾನಗಳ ಹೋರಾಟವಾಗಿದೆ. ಈ ಅದ್ಭುತ ಕ್ಷಣಕ್ಕೆ ನಾವು ಸಾಕ್ಷಿಯಾಗಲಿದ್ದೇವೆ. ನಾನು ಅಯೋಧ್ಯೆಯ ಬಗ್ಗೆ ಸ್ಕ್ರಿಪ್ಟ್ ಬರೆದಿದ್ದೇನೆ ಮತ್ತು ಸಂಶೋಧನೆ ಕೂಡ ಮಾಡಿದ್ದೇನೆ. ಇದು 600 ವರ್ಷಗಳ ಸುದೀರ್ಘ ಹೋರಾಟವಾಗಿದ್ದು, ಮೋದಿ ಸರ್ಕಾರ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಂದಾಗಿ ಈ ದಿನ ಸಾಧ್ಯವಾಗುತ್ತಿದೆ. ಕ್ರಿಶ್ಚಿಯನ್ನರಿಗೆ ವ್ಯಾಟಿಕನ್ ಇರುವಂತೆ ಹಿಂದೂಗಳಿಗೆ ಇದು ಅತಿದೊಡ್ಡ ಯಾತ್ರಾ ಸ್ಥಳವಾಗಲಿದೆ. ಮುಂದಿನ ದಿನಗಳಲ್ಲಿ ಇದು ಪ್ರಪಂಚದ ಮುಂದೆ ದೇಶ ಮತ್ತು ಸನಾತನ ಸಂಸ್ಕೃತಿಯ ಭವ್ಯ ಸಂಕೇತವಾಗಲಿದೆ. ನಮ್ಮ 'ತೇಜಸ್' ಚಿತ್ರದಲ್ಲಿ ರಾಮಮಂದಿರವೂ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ನನಗೆ ರಾಮನನ್ನು ನೋಡಬೇಕೆನಿಸಿತು. ಅದಕ್ಕೆ ಇಂದು ಅಯೋಧ್ಯೆಗೆ ಭೇಟಿ ನೀಡಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ:ಕೆಂಪು ಕೋಟೆಯಲ್ಲಿ ರಾವಣ ದಹನ ಮಾಡಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ನಟಿ ಕಂಗನಾ ರಣಾವತ್