ತಿರುಮಲ ಶ್ರೀ ವೆಂಕಟೇಶ್ವರನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ - ವಿಡಿಯೋ - etv bharat kannada
Published : Dec 14, 2023, 9:51 PM IST
ತಿರುಮಲ (ಆಂಧ್ರ ಪ್ರದೇಶ):ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಇಂದು ಸಂಜೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ತಿರುಮಲಕ್ಕೆ ಆಗಮಿಸಿ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಅವರ ಸಹೋದರಿ ಮತ್ತು ಗಾಲ್ಫ್ ಆಟಗಾರ್ತಿ ಅನಿಶಾ ಪಡುಕೋಣೆ ಕೂಡ ಜೊತೆಗಿದ್ದರು. ದೀಪಿಕಾ ಪಡುಕೋಣೆ ದೇವಾಲಯದ ಭೇಟಿಗಾಗಿ ಬ್ಲ್ಯಾಕ್ ದಿರಿಸನ್ನು ಆಯ್ದುಕೊಂಡಿದ್ದರು. ದೇವಸ್ಥಾನದಲ್ಲಿ ನಟಿಗಾಗಿ ಬಿಗಿ ಭದ್ರತೆ ಕೂಡ ಏರ್ಪಡಿಸಲಾಗಿತ್ತು.
ದೀಪಿಕಾ ಪಡುಕೋಣೆ ಸಿನಿಮಾ ವಿಚಾರವಾಗಿ ನೋಡುವುದಾದರೆ, ಹೃತಿಕ್ ರೋಷನ್ ಜೊತೆ ಫೈಟರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ನಟಿಯ ಕ್ಯಾರೆಕ್ಟರ್ ಪೋಸ್ಟರ್ ಅನಾವರಣಗೊಂಡಿತ್ತು. ಮುಂದಿನ ಜನವರಿ 25ರಂದು ತೆರೆಕಾಣಲು ಸಜ್ಜಾಗುತ್ತಿರುವ ಫೈಟರ್ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಈ ಸಾಲಿನಲ್ಲಿ ಬಿಡುಗಡೆ ಆಗಿರುವ ನಟಿಯ ಪಠಾಣ್ ಮತ್ತು ಜವಾನ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿವೆ. ಹಾಗಾಗಿ ನಟಿಯ ಮುಂದಿನ ಚಿತ್ರಗಳ ಬಗ್ಗೆ ಸಿನಿಪ್ರಿಯರು ಕುತೂಹಲ ಹೊಂದಿದ್ದಾರೆ. ಇನ್ನೂ ಪ್ರಭಾಸ್ ಜೊತೆಗಿನ ಕಲ್ಕಿ 2898 AD ಸೆಟ್ನಲ್ಲಿದೆ.
ಇದನ್ನೂ ಓದಿ:'ಫೈಟರ್' ಟೀಸರ್: ಮೈನವಿರೇಳಿಸುವ ವೈಮಾನಿಕ ದೃಶ್ಯಗಳೊಂದಿಗೆ ಬಂದ ಹೃತಿಕ್, ದೀಪಿಕಾ