ಸುದೀಪ್ ಸಿನಿಮಾ ಜರ್ನಿಗೆ 27 ವರ್ಷ!: ಕೇಕ್ ತಿನ್ನಿಸಿ ಸಂಭ್ರಮಿಸಿದ ಶಿವರಾಜ್ ಕುಮಾರ್ ದಂಪತಿ - ಕೆಸಿಸಿ ಕಪ್ ಕ್ರಿಕೆಟ್ ಮ್ಯಾಚ್
ಮನೋಜ್ಞ ಅಭಿನಯದ ಮೂಲಕ ಕನ್ನಡ ಸಿನಿಮಾರಂಗ ಮಾತ್ರವಲ್ಲ, ದೇಶದಲ್ಲೇ ಬಹು ಬೇಡಿಕೆಯ ನಟರಾಗಿ ಹೆಸರು ಮಾಡಿದವರು ಕಿಚ್ಚ ಸುದೀಪ್. ಎರಡು ದಿನದ ಹಿಂದಷ್ಟೇ ಅವರು ಸಿನಿಮಾ ಇಂಡಸ್ಟ್ರಿಗೆ ಬಂದು 27 ವರ್ಷಗಳನ್ನು ಪೂರೈಸಿದ್ದಾರೆ. ಕಿಚ್ಚನ ಬಳಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ ಸರ್‌ಪ್ರೈಸ್ ಆಗಿ ಆಗಮಿಸಿ ಕೇಕ್ ಕಟ್ ಮಾಡಿ ಸ್ಮರಣೀಯ ಸಂದರ್ಭವನ್ನು ಸಂಭ್ರಮಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಕಪ್ ಸೀಸನ್ 3 ಕ್ರಿಕೆಟ್ ಟೂರ್ನಿ ಘೋಷಣೆಯಾಗಿದ್ದು, ಇದೇ ತಿಂಗಳು ಟೂರ್ನಿ ನಡೆಯಲಿದೆ. ಹೀಗಾಗಿ ಸುದೀಪ್ ತಂಡ ಯಲಹಂಕ ಸಮೀಪದ ಜೆಸ್ಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕ್ರಿಕೆಟ್ ಮೈದಾನಕ್ಕೆ ಆಗಮಿಸಿದ ಶಿವರಾಜ್ ಕುಮಾರ್ ಹಾಗು ಪತ್ನಿ ಗೀತಾ ಶಿವರಾಜ್ ಕುಮಾರ್ ಕೇಕ್ ಕಟ್ ಮಾಡಿ 27ನೇ ವರ್ಷದ ಸಂಭ್ರಮವನ್ನು ಆಚರಿಸಿದರು. ಗೋಲ್ಡನ್ ಸ್ಟಾರ್ ಗಣೇಶ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಸುನೀಲ್ ರಾವ್, ರಾಹುಲ್ ಸೇರಿದಂತೆ ಸುದೀಪ್ ಗೆಳೆಯರ ಬಳಗ ಈ ಕ್ಷಣಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ಪಠಾಣ್ ಯಶಸ್ಸು: ಸೂಪರ್ ಹಿಟ್ 'ಬ್ರಹ್ಮಾಸ್ತ್ರ' ನಟಿ ಆಲಿಯಾ ಭಟ್ ಹೀಗಂದ್ರು ನೋಡಿ!