ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ಶಿವಣ್ಣ ಭೇಟಿ.. ಪಣಂಬೂರು ಕಡಲ ಕಿನಾರೆಯಲ್ಲಿಂದು 'ವೇದ' ಪ್ರಮೋಶನ್ - ಶಿವ ರಾಜ್ಕುಮಾರ್ ಲೇಟೆಸ್ಟ್ ನ್ಯೂಸ್
ಕುತ್ತಾರು (ದಕ್ಷಿಣ ಕನ್ನಡ): ಕೊರಗಜ್ಜನ ಆದಿಸ್ಥಳ ಕುತ್ತಾರು ಕ್ಷೇತ್ರಕ್ಕೆ ಇಂದು ನಟ ಶಿವ ರಾಜ್ಕುಮಾರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವೇದ ಚಿತ್ರದ ಪ್ರಮೋಷನ್ ಸಲುವಾಗಿ ಶಿವ ರಾಜ್ಕುಮಾರ್ ಹಾಗು ಚಿತ್ರತಂಡ ಮಂಗಳೂರಿಗೆ ಆಗಮಿಸಿದೆ. ಸಂಜೆ ಪಣಂಬೂರು ಕಡಲಕಿನಾರೆಯಲ್ಲಿ ವೇದ ಚಿತ್ರದ ಪ್ರಮೋಶನ್ ನಡೆಯಲಿದೆ. ಈ ಹಿನ್ನೆಲೆ ಶಿವ ರಾಜ್ಕುಮಾರ್ ಜೊತೆ ಚಿತ್ರತಂಡ ಕೂಡ ಕುತ್ತಾರಿಗೆ ಭೇಟಿ ನೀಡಿತ್ತು. ಇದಕ್ಕೂ ಮುನ್ನ ಶಿವರಾಜ್ಕುಮಾರ್ ದಂಪತಿ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೂ ಭೇಟಿ ನೀಡಿದ್ದರು.
Last Updated : Feb 3, 2023, 8:35 PM IST