ETV Bharat Karnataka

ಕರ್ನಾಟಕ

karnataka

video thumbnail
ನಟ ಮಿಲಿಂದ್ ಸೋಮನ್

ETV Bharat / videos

56ರ ಹರೆಯದಲ್ಲೂ ಸಖತ್​ ಫಿಟ್ ನಟ ಮಿಲಿಂದ್ ಸೋಮನ್: ಕಾರಣ ಇದೇ ನೋಡಿ! - ಮಿಲಿಂದ್ ಸೋಮನ್ ಓಟ

author img

By

Published : Jul 13, 2023, 4:26 PM IST

ಡೆಹ್ರಾಡೂನ್ (ಉತ್ತರಾಖಂಡ):ನಟ, ಮಾಡೆಲ್ ಮಿಲಿಂದ್ ಸೋಮನ್ (Milind Soman) ಫಿಟ್ನೆಸ್ ಐಕಾನ್​.  56ರ ಹರೆಯದಲ್ಲೂ ಸಖತ್​ ಫಿಟ್ ಆಗಿದ್ದಾರೆ. ಉತ್ತಮ ಆರೋಗ್ಯ, ಸದೃಢ ದೇಹ ಹೊಂದಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ವಯಸ್ಸಿನಲ್ಲೂ ಮಿಲಿಂದ್ ಸೋಮನ್ ಅವರು ಫಿಟ್ನೆಸ್​ ಮತ್ತು ಎನರ್ಜಿ ವಿಷಯದಲ್ಲಿ ಯುವಕರನ್ನು ಹಿಂದಿಕ್ಕುತ್ತಾರೆ. ಇವರು ಹೆಚ್ಚಾಗಿ ಓಡುವುದು ಅಥವಾ ಸೈಕ್ಲಿಂಗ್ ಮಾಡುವುದನ್ನು ನೀವು ಕಾಣಬಹುದು. ತಮ್ಮ ದಿನಚರಿಯಲ್ಲಿ ಈ ವಿಷಯಗಳನ್ನು ಕಣ್ಣುನಿಟ್ಟಾಗಿ ಪಾಲಿಸುತ್ತಾರೆ. ಇತ್ತೀಚೆಗೆ, ಮಿಲಿಂದ್ ಸೋಮನ್ ಅವರು ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ  ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಿಲಿಂದ್ ಸೋಮನ್ ಡೆಹ್ರಾಡೂನ್‌ನ ಶಾಂತ ವಾತಾವರಣದಲ್ಲಿ ಬರಿಗಾಲಿನಲ್ಲಿ ಓಡುತ್ತಿರುವುದನ್ನು ಕಾಣಬಹುದು. ಮಿಲಿಂದ್ ಸೋಮನ್ ಪ್ರತಿ ವಾರ ಮೂರರಿಂದ ನಾಲ್ಕು ಬಾರಿ ಮಾತ್ರ ಓಡುತ್ತಾರೆ. ಈ ಮೂಲಕ ಅವರು ತಮ್ಮನ್ನು ತಾವು ಸಕ್ರಿಯವಾಗಿರಿಸಿಕೊಳ್ಳುತ್ತಾರೆ. ಪ್ರತಿದಿನ 20 ನಿಮಿಷಗಳ ಕಾಲ ವ್ಯಾಯಾಮ ಮಾಡುತ್ತಾರೆ. ಆರೋಗ್ಯಕ್ಕೆ ಓಟ ಮತ್ತು ವ್ಯಾಯಾಮ ಬಹಳ ಮುಖ್ಯ ಎಂದು ಮಿಲಿಂದ್ ಸೋಮನ್ ನಂಬಿದ್ದಾರೆ. ಸದ್ಯ ಅವರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.  

ಇದನ್ನೂ ಓದಿ:2023ರ ಟಾಪ್​ 10 ಸಿನಿಮಾಗಳ ಪಟ್ಟಿ ಬಿಡುಗಡೆ: ಕನ್ನಡಿಗರಿಗೆ ನಿರಾಶೆ

ABOUT THE AUTHOR

author-img

...view details