ಕರ್ನಾಟಕ

karnataka

ನಟ ಕುಮಾರ್​ ಗೋವಿಂದ್

ETV Bharat / videos

ಲೀಲಾವತಿ ಅಮ್ಮನ ನೆನೆದು ಕಣ್ಣೀರಿಟ್ಟ ನಟ ಕುಮಾರ್​ ಗೋವಿಂದ್​​! - actress Leelavathi

By ETV Bharat Karnataka Team

Published : Dec 9, 2023, 11:59 AM IST

Updated : Dec 9, 2023, 2:12 PM IST

ಬೆಂಗಳೂರು: ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲು ನೆಲಮಂಗಲದ ಅಂಬೇಡ್ಕರ್​ ಮೈದಾನದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ. 

ಓದಿ: 200 ಮಂದಿ ಜೂನಿಯರ್ ನಟರಿಗೆ ನೆರವಾದ್ರು ಹಿರಿಯ ನಟಿ ಡಾ.ಲೀಲಾವತಿ

ಲೀಲಾವತಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ನಟ ಕುಮಾರ್​ ಗೋವಿಂದ್​​ ಮಾತನಾಡಿ, ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ. ಅಮ್ಮ ಬಹು ಸಮಯಗಳಿಂದ ಪರಿಚಿತರು. ನಾನು ಮತ್ತು ವಿನೋದ್​​ ಸಿನಿಮಾಗಳನ್ನು ಮಾಡುವಾಗ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ನೆಲಮಂಗಲದಲ್ಲಿ ತೋಟ ಖರೀದಿಸಿದ ಬಳಿಕ ಅಮ್ಮನವರ ಜೊತೆ ಹೆಚ್ಚು ಸಂಪರ್ಕದಲ್ಲಿರುತ್ತಿದ್ದೆ. ನನ್ನ ಜಾಗದಲ್ಲಿ ಅವರು ತಮ್ಮ ಕೈಯಿಂದ ಭತ್ತ ಹಾಕಿ ಆಶೀರ್ವದಿಸಿದ್ದರು. ಅವೆಲ್ಲವೂ ಹೃದಯ ತಟ್ಟಿದ ನೆನಪುಗಳೆಂದು ಹೇಳಿ ಭಾವುಕರಾದರು.

ಇದನ್ನೂ ಓದಿ:ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಪಾರ್ಥಿವ ಶರೀರ: ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಅಭಿಮಾನಿಗಳು

ಪರಿಸರ, ಪ್ರಾಣಿ - ಪಕ್ಷಿಗಳ ಮೇಲೆ ಅತಿಯಾದ ಒಲವು ಹೊಂದಿದ್ದರು. ಪ್ರಾಣಿಗಳನ್ನು ಮಕ್ಕಳಂತೆ ನೋಡುತ್ತಿದ್ದರು. ಆ ಪ್ರಾಣಿಗಳೂ ಈಗ ಕಣ್ಣೀರಿಡುತ್ತಿವೆ. ಅವರ ಜೀವನ ನಮಗೆಲ್ಲರಿಗೂ ಆದರ್ಶ. ಅವರ ಕೆಲಸಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ತಿಳಿಸಿ ಭಾವುಕರಾದರು.

ಇದನ್ನು ಓದಿ:ಶ್ರವಣಕುಮಾರನಂತೆ ತಾಯಿಯ ಸೇವೆ ಮಾಡುತ್ತಿರುವ ವಿನೋದ್ ರಾಜ್

Last Updated : Dec 9, 2023, 2:12 PM IST

ABOUT THE AUTHOR

...view details