ತಂದೆ, ತನ್ನ ಖ್ಯಾತಿ ಹೊತ್ತು ತಿರುಗಲಿಲ್ಲ ಆ ಪ್ರತಿಭೆ: ಅಪ್ಪು ಬಗ್ಗೆ ಕಮಲ್ ಹಾಸನ್ ಗುಣಗಾನ - r kamal hassan speaks about Puneeth
ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಶುಕ್ರವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ವಿಡಿಯೋ ಸಂದೇಶದಲ್ಲಿ ಮಾತನಾಡಿದ ನಟ ಕಮಲ್ ಹಾಸನ್, ಅಪ್ಪು ಇಲ್ಲ ಎಂಬುದನ್ನು ನೆನೆಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಅಪ್ಪುನನ್ನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದೆ. ಬಹಳ ಪ್ರತಿಭಾವಂತ. ಸಿನಿಮಾ ಕ್ಷೇತ್ರದಲ್ಲಿ ತಂದೆ ಸಾಧಿಸಿದ್ದನ್ನು ಸಾಧಿಸಿದ ಕಿರಿಯ ಪುತ್ರ. ಬಾಲ ನಟನಾಗೇ 29 ಸಿನಿಮಾಗಳಲ್ಲಿ ಅಭಿನಯಿಸಿದ್ದ. ಆದರೆ ಎಂದಿಗೂ ತಂದೆಯ ಖ್ಯಾತಿಯನ್ನು ತನ್ನ ಹೆಗಲ ಮೇಲೆ ಹೊತ್ತು ತಿರುಗಲಿಲ್ಲ. ತನ್ನ ಖ್ಯಾತಿಯನ್ನೂ ಎಲ್ಲೂ ಬಳಸಲಿಲ್ಲ. ಬಹಳ ಶ್ರಮ ಜೀವಿಯಾಗಿದ್ದ ಅಪ್ಪು ಒಳ್ಳೆಯ ನೆನಪುಗಳನ್ನು ಆನಂದಿಸೋಣ ಎಂದರು.
Last Updated : Feb 3, 2023, 8:29 PM IST