ಹೆಣ್ಣು ಮಕ್ಕಳನ್ನು ಮುಟ್ಟುವ ಕಾಮುಕರಿಗೆ ತಕ್ಕ ಪಾಠವಾಗಬೇಕು: ನಟ ದರ್ಶನ್ - ದರ್ಶನ್ ಮೈಸೂರಿನಲ್ಲಿ ಮಾಧ್ಯಮಗೋಷ್ಟಿ
'ಕ್ರಾಂತಿ' ಸಿನಿಮಾ ಬಗ್ಗೆ ಚಿತ್ರದ ನಾಯಕ ದರ್ಶನ್ ಮೈಸೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ಈ ವೇಳೆ ಮಾಧ್ಯಮದಲ್ಲಿ ಪ್ರಸಾರವಾಗುವ ಯಾವುದೇ ವಿಚಾರಗಳು ಕೊನೆಯಲ್ಲಿ ಯಾವ ರೀತಿ ಅಂತ್ಯ ಕಂಡಿವೆ ಎಂಬುದನ್ನು ಸಹ ಬಿತ್ತರಿಸಿದರೆ ಒಳ್ಳೆಯದು. ಅತ್ಯಾಚಾರ ಪ್ರಕರಣದ ಬಗ್ಗೆ ವರದಿಯಾದಾಗ ಕೊನೆಗೆ ಆರೋಪಿಗೆ ಎಂತಹ ಶಿಕ್ಷೆಯಾಯಿತು ಎಂಬುದನ್ನೂ ಕೂಡ ಹೆಚ್ಚಿನ ಒತ್ತು ನೀಡಿ ಪ್ರಸಾರ ಮಾಡಬೇಕು. ದೌರ್ಜನ್ಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಬೇಕು. ಯಾರೇ ಆದರೂ ಕೂಡ ಹೆಣ್ಣುಮಕ್ಕಳನ್ನು ಮತ್ತೆ ಮುಟ್ಟಬೇಕೆಂದರೆ ಆತನೆದುರು ಶಿಕ್ಷೆಯ ಭಯ ಬರಬೇಕು. ಅಂತಹ ಕಾಮುಕರಿಗೆ ತಕ್ಕ ಪಾಠ ಆಗಬೇಕು ಎಂದು ದರ್ಶನ್ ಪ್ರತಿಪಾದಿಸಿದರು.
Last Updated : Feb 3, 2023, 8:35 PM IST