ಬೆಳಗಾವಿ ಜನರ ಪ್ರೀತಿಗೆ ನಾನೆಂದಿಗೂ ಋಣಿ: ನಟ ಡಾಲಿ ಧನಂಜಯ್ - etv bharat kannada
ಬೆಳಗಾವಿ: ಬೆಳಗಾವಿ ಭಾಗದ ಜನರು ಕಲಾವಿದರನ್ನು ತುಂಬಾ ಪ್ರೀತಿಸುತ್ತಾರೆ. ಅವರ ಪ್ರೀತಿಗೆ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದು ನಟ ಡಾಲಿ ಧನಂಜಯ್ ಹೇಳಿದರು. ಅವರು ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಇದೇ ಮಾರ್ಚ್ 30 ರಂದು 'ಗುರುದೇವ್ ಹೊಯ್ಸಳ' ಸಿನಿಮಾ ಬಿಡುಗಡೆಯಾಗಲಿದೆ. ಬೆಳಗಾವಿ ಸುತ್ತಲಿನ ಭಾಗಗಳಲ್ಲಿ ಈ ಸಿನಿಮಾ ಶೂಟಿಂಗ್ ನಡೆದಿದೆ. ಸಿನಿಮಾ ರಿಲೀಸ್ಗೂ ಮುನ್ನ ಬೆಳಗಾವಿಗೆ ಭೇಟಿ ನೀಡಬೇಕೆಂದು ಬಂದಿದ್ದೇನೆ ಎಂದರು.
ಹೊಯ್ಸಳ ಸಿನಿಮಾ ಬೆಳಗಾವಿ ಅಥಣಿ ಭಾಗಗಳಲ್ಲಿ ನಡೆದ ಕಥೆಯಾಗಿದ್ದು, ಬೆಳಗಾವಿ, ಸಂಕೇಶ್ವರ, ಅಥಣಿಯಲ್ಲಿ ಒಂದೂವರೆ ತಿಂಗಳ ಕಾಲ ಈ ಸಿನಿಮಾದ ಶೂಟಿಂಗ್ ಮಾಡಿದ್ದೇವೆ. ಇವತ್ತು ನಂದಗಡದ ರಾಯಣ್ಣ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತೇನೆ. ನಂತರ ಸಂಜೆ ಬೈಲಹೊಂಗಲದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದರು.
ಬಳಿಕ, ಶೂಟಿಂಗ್ ವೇಳೆ ಬೆಳಗಾವಿ ಜನ ತುಂಬಾ ಪ್ರೀತಿ ತೋರಿಸಿದ್ದಾರೆ. ಇಲ್ಲಿನ ಜನರು ಕಲಾದವಿದರನ್ನು ತುಂಬಾ ಪ್ರೀತಿಸುತ್ತಾರೆ. ಜೊತೆಗೆ ಅವರಿಗೆ ತುಂಬಾ ದೊಡ್ಡ ಶಕ್ತಿಯಾಗಿ ನಿಲ್ಲುತ್ತಾರೆ. ದಯವಿಟ್ಟು ಎಲ್ಲರೂ ಕುಟುಂಬ ಸಮೇತ 'ಗುರುದೇವ್ ಹೊಯ್ಸಳ' ಸಿನಿಮಾವನ್ನು ಥಿಯೇಟರ್ಗೆ ಹೋಗಿ ನೋಡಿ ಎಂದು ಅಭಿಮಾನಿಗಳಲ್ಲಿ ಡಾಲಿ ಮನವಿ ಮಾಡಿದರು.