ಕರ್ನಾಟಕ

karnataka

ಅಭಿಷೇಕ್​ ಬಚ್ಚನ್​

ETV Bharat / videos

'ಪ್ರತೀ ಶುಕ್ರವಾರ ನಟರ ಭವಿಷ್ಯ ನಿರ್ಧಾರವಾಗುತ್ತದೆ': ಅಭಿಷೇಕ್​ ಬಚ್ಚನ್​ - ಘೂಮರ್​ ಸಿನಿಮಾ

By

Published : Aug 5, 2023, 5:06 PM IST

ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ಘೂಮರ್​. ಶುಕ್ರವಾರ ಮುಂಬೈನಲ್ಲಿ ಟ್ರೇಲರ್​ ರಿಲೀಸ್​ ಈವೆಂಟ್​ ನಡೆಯಿತು. ಮಾಧ್ಯಮದವರ ಜೊತೆ ಸಂವಾದದ ವೇಳೆ ಬಿಗ್​ ಬಿ ಪುತ್ರ 'ಬಾಕ್ಸ್​ ಆಫೀಸ್ ಚಂಚಲ ಸ್ವಭಾವ'ದ ಬಗ್ಗೆ ಮಾತನಾಡಿದರು. 

ಬಾಕ್ಸ್​ ಆಫೀಸ್​ ಕಲೆಕ್ಷನ್​ ವಿಚಾರದಲ್ಲಿ ಏರಿಳಿತ ಕಂಡಿರುವ ಜೂನಿಯರ್​ ಬಚ್ಚನ್​​, ಪ್ರತೀ 'ಶುಕ್ರವಾರ'ವು ಮನರಂಜನಾ ಉದ್ಯಮದಲ್ಲಿರುವ ಪ್ರತಿಯೊಬ್ಬರ ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಘೂಮರ್​ ಸಿನಿಮಾ ಇದೇ ಆಗಸ್ಟ್ 18ರಂದು ತೆರೆ ಕಾಣಲಿದೆ. ಮೂರನೇ ಬಾರಿಗೆ ನಟಿ ಸೈಯಾಮಿ ಖೇರ್ ಅವರು ಅಭಿಷೇಕ್​ ಬಚ್ಚನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಬಚ್ಚನ್​ ಅವರೊಂದಿಗೆ ಅದ್ಭುತ ಸಮಯ ಕಳೆದಿದ್ದೇನೆ ಎಂದು ನಟಿ ತಿಳಿಸಿದ್ದಾರೆ. 

ಈವೆಂಟ್​ನಲ್ಲಿ ಹಾಜರಿದ್ದ ನಿರ್ದೇಶಕ ಆರ್​ ಬಾಲ್ಕಿ ಮಾತನಾಡಿ, ಘೂಮರ್​ ಕಥೆ ಕ್ರಿಕೆಟ್​ ಮೇಲೆ ಕೇಂದ್ರೀಕೃತವಾಗಿಲ್ಲ. ಆದ್ರೆ ಕ್ರೀಡೆ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿ ಕಾಣಿಸುತ್ತದೆ ಎಂದು ತಿಳಿಸಿದ್ದಾರೆ. ಅಭಿಷೇಕ್​ ಬಚ್ಚನ್​ ತಂದೆ, ಹಿರಿಯ, ಪ್ರಸಿದ್ಧ ನಟ ಅಮಿತಾಭ್​ ಬಚ್ಚನ್​​, ಶಬಾನಾ ಅಜ್ಮಿ, ಅಂಗದ್​ ಬೇಡಿ ಕೂಡ ಚಿತ್ರದಲ್ಲಿ ನಟಿಸಿದ್ದು, ಸಿನಿಮಾ ಆಗಸ್ಟ್ 18ರಂದು ತೆರೆ ಕಾಣಲಿದೆ.

ಇದನ್ನೂ ಓದಿ:Ghoomer Trailer: ಇತಿಮಿತಿ ಮೆಟ್ಟಿ ನಿಂತು ಕ್ರಿಕೆಟ್​ ಸಾಧನೆ - ಬಲಗೈ ಇಲ್ಲದಿದ್ದರೇನಂತೆ? ಎಡಗೈಯಲ್ಲೇ ಬೌಲಿಂಗ್​​!

ABOUT THE AUTHOR

...view details