ಈಗ ನನಗೆ ಸಚಿವ ಸ್ಥಾನ ಕೊಟ್ಟರೂ ಬೇಡ: ಶಾಸಕ ರಘುಪತಿ ಭಟ್ - Cabinet expansion
ಉಡುಪಿ: ಈಗ ನನಗೆ ಸಚಿವ ಸ್ಥಾನ ಕೊಟ್ಟರೂ ಬೇಡ, ಆದರೆ ಮುಂದಿನ ಅವಧಿಗೆ ನೋಡೋಣ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ನಡೆಸಲು ದೆಹಲಿಗೆ ದೌಡಾಯಿಸಿದ್ದಾರಲ್ವ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನಂತೂ ಈಗ ಲಾಬಿ ಮಾಡುವುದಿಲ್ಲ. ಈಗ ಕೊಟ್ಟರೂ ಬೇಡ. ಯಾಕೆಂದರೆ ಇನ್ನೊಂದು ವರ್ಷದಲ್ಲಿ ಎಲೆಕ್ಷನ್ ಬರುತ್ತದೆ. ಹಿಂದೆ ಯಡಿಯೂರಪ್ಪ ಸಿಎಂ ಆದಾಗ, ಬೊಮ್ಮಾಯಿ ಸಿಎಂ ಆಗುವ ಸಂದರ್ಭದಲ್ಲೂ ನಾನು ಸಚಿವ ಸ್ಥಾನಕ್ಕೆ ಪ್ರಯತ್ನಪಟ್ಟಿಲ್ಲ. ಮುಂದಿನ ಅವಧಿಗೆ ನೋಡೋಣ ಎಂದು ರಘುಪತಿ ಭಟ್ ಹೇಳಿದರು.
Last Updated : Feb 3, 2023, 8:22 PM IST