ಕರ್ನಾಟಕ

karnataka

ETV Bharat / videos

ಖಾರ್ಕೀವ್​ನಿಂದ ದೇಶಕ್ಕೆ ಆಗಮಿಸಿದ ರೋಚಕ ಕಹಾನಿ ಬಿಚ್ಚಿಟ್ಟ ದಾವಣಗೆರೆಯ ವಿನಯ್ - ರಷ್ಯಾ ಉಕ್ರೇನ್ ಯುದ್ಧ

By

Published : Mar 4, 2022, 12:14 PM IST

Updated : Feb 3, 2023, 8:18 PM IST

ದಾವಣಗೆರೆ: ಉಕ್ರೇನ್​ ವೈದ್ಯಕೀಯ ಕಾಲೇಜ್​ನಲ್ಲಿ ಓದುತ್ತಿದ್ದ ದಾವಣಗೆರೆಯ ಎಲ್​ಐಸಿ ಕಾಲೋನಿ ನಿವಾಸಿ ವಿನಯ್ ಕಲ್ಲಿಹಾಳ್ ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ. ಯುದ್ಧದ ಕಾರ್ಮೋಡದಿಂದ ದಾವಣಗೆರೆಗೆ ತಲುಪಿದ ವಿನಯ್ ಕಲ್ಲಿಹಾಳ್​ಗೆ ಪೋಷಕರು ಸಿಹಿ ತಿನಿಸಿ ಸಂತಸದಿಂದ ಬರಮಾಡಿಕೊಂಡರು. ಉಕ್ರೇನ್​ ಸ್ಥಿತಿಗತಿಯ ಕುರಿತು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡ ವಿನಯ್, ​ಅಲ್ಲಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಮಗೆ ಬಾಂಬ್ ಸ್ಫೋಟದ ಸೌಂಡ್​ ಕೇಳಿಸುತ್ತಿತ್ತು. ಭಾರತೀಯ ರಾಯಭಾರ ಕಚೇರಿಯವರು ನಮಗೆ ಸಹಾಯ ಮಾಡಿದರು. ನಮಗೆ ಗಡಿ ಭಾಗದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದರು ಎಂದರು.
Last Updated : Feb 3, 2023, 8:18 PM IST

ABOUT THE AUTHOR

...view details