ಡಿಬಾಸ್ ಪರ ಅಭಿಮಾನಿಗಳ ಜೈಕಾರ.. ಅರ್ಧಕ್ಕೆ ಭಾಷಣ ನಿಲ್ಲಿಸಿದ ಸಿಎಂ! VIDEO - ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಬೆಂಗಳೂರು: 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಎಂ ಬೊಮ್ಮಾಯಿ ಮಾತನಾಡುತ್ತಿದ್ದ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮಕ್ಕೆ ಹಾಜರಾದಾಗ ನೆರೆದಿದ್ದ ಅಭಿಮಾನಿಗಳು ಡಿಬಾಸ್, ಡಿಬಾಸ್ ಎಂದು ದರ್ಶನ್ಗೆ ಜೈಕಾರ ಹಾಕಿದರು. ಸಿಎಂ ಕೆಲ ಹೊತ್ತು ಭಾಷಣ ನಿಲ್ಲಿಸಿದರೂ ಡಿಬಾಸ್ ಪರ ಅಭಿಮಾನಿಗಳ ಜೈಕಾರ ನಿಲ್ಲಲಿಲ್ಲ. ಆಗ ಭಾಷಣ ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ತೆರಳಿ ಸಿಎಂ ಕುಳಿತುಕೊಂಡರು. ದರ್ಶನ್ ಮನವಿ ಮಾಡಿದ ನಂತರ ಅಭಿಮಾನಿಗಳು ಸುಮ್ಮನಾದರು. ಆಗ ಸಿಎಂ ಮತ್ತೆ ಭಾಷಣ ಮುಂದುವರೆಸಿದರು.
Last Updated : Feb 3, 2023, 8:18 PM IST