ನೆರೆ ಸಂತ್ರಸ್ತರಿಗೆ ದಿನನಿತ್ಯದ ವಸ್ತು ನೀಡಿ ಮಾನವೀಯತೆ ಮೆರೆದ ಯುವಕರು! - ನೆರೆ ಸಂತ್ರಸ್ತರಿಗೆ ನೆರವು
ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಇವರ ನೆರವಿಗೆ ಇದೀಗ ವಿವಿಧ ಸ್ವಸಹಾಯ ಸಂಘ,ವಿವಿಧ ಸಂಘಟನೆ ಸೇರಿ ಯುವಕರು ಗುಂಪು ತಂಡೋಪ-ತಂಡವಾಗಿ ಸಹಾಯದ ಹಸ್ತ ನೀಡುತ್ತಿದ್ದಾರೆ. ಇದೀಗ ದಾವಣಗೆರೆ ಹಳೇ ಕುಂದುವಾಡದ 25ಕ್ಕೂ ಹೆಚ್ಚು ಯುವಕರ ತಂಡ ಗೋಕಾಕ್ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ತೆರಳಿ, 100 ಕ್ಕೂ ಹೆಚ್ಚು ಅಕ್ಕಿ ಚೀಲ ಸೇರಿದಂತೆ ದಿನನಿತ್ಯದ ವಸ್ತು ನೀಡುವುದರ ಜೊತೆಗೆ ಅವರ ಕಷ್ಟಗಳಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.