ಬೆಣ್ಣೆ ಹುಳು ರೋಗಕ್ಕೆ ತತ್ತರ: ಮೆಕ್ಕೆಜೋಳ ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿದ ರೈತ - ಮೆಕ್ಕೆಜೋಳ
ಬರಗಾಲಕ್ಕೆ ಖ್ಯಾತಿಗಳಿಸಿರುವ ಚಿತ್ರದುರ್ಗ ಜಿಲ್ಲೆಯ ರೈತರ ಪರಿಸ್ಥಿತಿ ಹೇಳತೀರದು. ಮಳೆ ಬೆಳೆ ಇಲ್ಲದೆ ಹೈರಾಣಾಗಿದ್ದ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸತತ ಐದಾರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆಯ ರೈತರು ಕೆಲ ದಿನಗಳ ಹಿಂದೆ ಬಿದ್ದಾ ಅಲ್ಪ ಸ್ವಲ್ಪ ಮಳೆಯಲ್ಲೇ ಮುಸುಕಿನ ಜೋಳ ಬಿತ್ತಿದ್ದರು. ಆದರೆ ಮೆಕ್ಕೆಜೋಳ ಬೆಳೆ ಕೀಟ ಬಾಧೆಯಿಂದ ಇದೀಗ ನೆಲ ಕಚ್ಚುವ ಹಂತ ತಲುಪಿದೆ. ಇದರಿಂದ ಚಿಂತೆಗೀಡಾದ ರೈತನೋರ್ವ ಬೆಳೆದಿದ್ದ ನೂರಾರು ಎಕರೆ ಮೆಕ್ಕೆಜೋಳ ಬೆಳೆಯ ಮೇಲೆ ಟ್ಟ್ಯಾಕ್ಟರ್ ಹರಿಸಿ ನಾಶಗೊಳಿಸಿದ್ದಾನೆ.