ಠಾಕ್ರೆ ಅವ್ರಿಗೇನೂ ಬೇರೆ ಕೆಲಸಾ ಇಲ್ಲ, ಅವ್ರು ಮನೆಗೆ ಹೋಗ್ತಾರೆ.. ಸಚಿವ ಪ್ರಭು ಚೌಹಾಣ್ - ಬೆಳಗಾವಿ ಉದ್ಧವ್ ಠಾಕ್ರೆ
ಕಾರವಾರ : ಮಹಾರಾಷ್ಟ್ರ ಎಷ್ಟೇ ಪ್ರಯತ್ನಪಟ್ಟರೂ ಕರ್ನಾಟಕದ ಒಂದಿಂಚು ಭೂಮಿ ಕೊಡುವುದಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಚೌಹಾಣ್, ಕರ್ನಾಟಕದ ಜನತೆ ಯಾರೂ ಕೂಡ ಮಹಾರಾಷ್ಟ್ರಕ್ಕೆ ಸೇರಲ್ಲ. ರಾಷ್ಟ್ರೀಯವಾದಿ, ಕಾಂಗ್ರೆಸ್ ಮತ್ತು ಶಿವಸೇನೆ ಮೂವರು ಸೇರಿ ಯಾವುದೇ ಕೆಲಸ ಮಾಡುತ್ತಿಲ್ಲ. ಅವರ 'ಸ್ಥಿತಿ ತೀನ್ ತುಕ್ಡಾ, ಕಾಮ್ ಬಿಗ್ಡಾ' ಎನ್ನುವಂತಾಗಿದೆ. ಅವರು ಎಷ್ಟೇ ಬೊಬ್ಬೆ ಹೊಡೆದ್ರೂ ಅದಕ್ಕೆ ಬೆಲೆ ಇಲ್ಲ. ಕರ್ನಾಟಕದಲ್ಲಿರುವ ಮರಾಠಿಗರು, ಕನ್ನಡಿಗರು ಎಲ್ಲರೂ ಒಂದೇ. ಉದ್ಧವ್ ಠಾಕ್ರೆ ಬೇರೆಯವರ ಬೆಂಬಲದಿಂದ ಸಿಎಂ ಆಗಿರುವುದೇ ಅವರ ಭಾಗ್ಯ. ಆದರೆ, ಅವರ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.