'ನನ್ನ ಜೀವನದಲ್ಲಿ ಯಾವಾಗಲೂ 'ಧಕಾಡ್' ಕೆಲಸಗಳನ್ನು ಮಾಡುತ್ತಿದ್ದೇನೆ' - 'ಧಕಾಡ್' ಚಿತ್ರದಲ್ಲಿ ಗೂಢಾಚರ್ಯೆ ಪಾತ್ರ
ತಲೈವಿ ಪೊಲಿಟಿಕಲ್ ಡ್ರಾಮಾದ ನಂತರ ನಟಿ ಕಂಗನಾ ರಣಾವತ್ ಈಗ ಮುಂಬರುವ 'ಧಕಾಡ್' ಚಿತ್ರದಲ್ಲಿ ಗೂಢಾಚಾರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಕ್ಕಳ ಕಳ್ಳಸಾಗಣೆ ಮತ್ತು ಮಹಿಳೆಯರ ಶೋಷಣೆ ಎಂಬ ವಿಷಯವನ್ನು ಒಳಗೊಂಡಿರುವ ಚಿತ್ರದಲ್ಲಿ ಏಜೆಂಟ್ ಅಗ್ನಿ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಅದೃಷ್ಟ ಎಂದು ಹೇಳಿದ್ದಾರೆ. ಬೃಹತ್ ಮಟ್ಟದಲ್ಲಿ ಈ ಚಿತ್ರವನ್ನು ರಜನೀಶ್ ರಾಜಿ ಘಾಯ್ ನಿರ್ದೇಶಿಸಿದ್ದಾರೆ. ದೀಪಕ್ ಮುಕುತ್ ಮತ್ತು ಸೊಹೈಲ್ ಮಕ್ಲಾಯ್ ನಿರ್ಮಿಸಿದ್ದಾರೆ. ಧಕಾಡ್ ಅನ್ನು ಏಪ್ರಿಲ್ 8, 2022ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.